ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಎನ್.ಐ.ಎ ಶೋಧ ನಡೆಸಿದ್ದು, 3 ಮಂದಿಯನ್ನು ಬಂಧಿಸಿದೆ.
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಹುಬ್ಬಳ್ಳಿ ಮತ್ತು ಮೈಸೂರು ಜಿಲ್ಲೆಗಳಲ್ಲಿ 05 ಸ್ಥಳಗಳಲ್ಲಿ ಶೋಧನೆ ನಡೆಸಿದ್ದು, ಎನ್.ಐ.ಎ ಪ್ರಕರಣ (RC-36/2022/NIA/DLI) 03 ಆರೋಪಿಗಳನ್ನು ಬಂಧಿಸಿದೆ.
ಬೆಳ್ಳಾರೆ ನಿವಾಸಿ ಹಾಗೂ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ರನ್ನು ಜು.26 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ., ಈ ಪ್ರಕರಣವನ್ನು ಆರಂಭದಲ್ಲಿ ಎಫ್‌ಐಆರ್ ಸಂಖ್ಯೆ 63/2022 ದಿನಾಂಕ 27.07.2022 ರಂತೆ ಪಿಎಸ್ ಬೆಳ್ಳಾರೆ, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯದಲ್ಲಿ ದಾಖಲಿಸಲಾಗಿದೆ ಮತ್ತು 04.08.2022 ರಂದು ಎನ್.ಐ.ಎ ಯಿಂದ ಮರು ದಾಖಲಿಸಲಾಯಿತು.
ಇಂದು ನಡೆಸಿದ ಶೋಧಗಳಲ್ಲಿ, ಆರೋಪಿಗಳು ಮತ್ತು ಶಂಕಿತರ ಮನೆಗಳಿಂದ ಡಿಜಿಟಲ್ ಸಾಧನಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳ ವಿವರ :
ಸುಳ್ಯ ತಾಲೂಕು, ಬೆಳ್ಳಾರೆ ಗ್ರಾಮದ ಆದಂ ಕುಂಞಿ ರವರ ಪುತ್ರ ಕೆ ಮಹಮ್ಮದ್ ಇಕ್ಬಾಲ್, ಆದಂ ಕುಂಞಿ ರವರ ಇನ್ನೋರ್ವ ಪುತ್ರ ಕೆ ಇಸ್ಮಾಯಿಲ್ ಶಾಫಿ, ಸುಳ್ಯ ತಾಲೂಕು ನಾವೂರು ಗಾಂಧಿನಗರದ ಮೊಹಮ್ಮದ್ ರವರ ಪುತ್ರ ಇಬ್ರಾಹಿಂ ಶಾ ಬಂಧಿತರು.
ಈ ಪ್ರಕರಣದಲ್ಲಿ ಇದುವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ 4 ಆರೋಪಿಗಳ ವಿರುದ್ಧ ಎನ್‌ಐಎ ಬಹುಮಾನ ಘೋಷಿಸಿದ್ದು, ಅವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿದೆ ಎಂದು ಎನ್.ಐ.ಎ ಅಧಿಕೃತ ಪ್ರಕಟಣೆ ತಿಳಿಸಿದೆ.


























