ಸುಳ್ಯ: ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ನಡೆದಿದೆ.
ಐವರ್ನಾಡು ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಐವರ್ನಾಡಿನ ಶರೀಫ್ ಎಂಬವರು ಚಲಾಯಿಸುತ್ತಿದ್ದ ಮಾರುತಿ 800 ಹೊತ್ತಿ ಉರಿದಿದೆ.

ಶರೀಫ್ ಅವರು ಕಾರನ್ನು ಚಲಾಯಿಸುತ್ತಿದ್ದ ವೇಳೆ ಕಾರಿನ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಹೊತ್ತಿ ಉರಿದಿದೆ ಎಂದು ತಿಳಿದು ಬಂದಿದೆ. ಅಪಾಯ ಅರಿತ ಅವರು ತತ್‌ಕ್ಷಣ ಕಾರನ್ನು ನಿಲ್ಲಿಸಿದರು.
ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


























