ಪುತ್ತೂರು: ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ದಂಪತಿಗಳಿಬ್ಬರು ಅದೃಷ್ಟವಶಾತ್ ಪಾರಾದ ಘಟನೆ ಕುಂಬ್ರ ಸಮೀಪದ ಕೊಳ್ಳಾಜೆಯಲ್ಲಿ ನಡೆದಿದೆ.

ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೊಳ್ಳಾಜೆಯ ಬಳಿ ರಸ್ತೆಯ ಬದಿಯ ಚರಂಡಿಗೆ ಪಲ್ಟಿಯಾಗಿದೆ.
ಕಾರು ಚಲಾಯಿಸುತ್ತಿದ್ದ ಉಪ್ಪಿನಂಗಡಿಯ ಗೋಪಾಲಕೃಷ್ಣ ಭಟ್ ಮತ್ತು ಅವರ ಪತ್ನಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ..


























