ಜೇಸಿಐ ಭಾರತದ ವಲಯ 15ರ ವಾರ್ಷಿಕ ಸಮ್ಮೇಳನವು ಕಾರ್ಕಳದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಜೇಸಿಐ ಪುತ್ತೂರು ವಲಯವು ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಜೇಸಿಐ ಪುತ್ತೂರಿನ ಹಿರಿಯ ಸದಸ್ಯರಾದ ಜೇಸಿ ಪುರುಷೋತ್ತಮ್ ಶೆಟ್ಟಿ ರವರು ವಲಯಾಧ್ಯಕ್ಷರಾಗಿ ಚುನಾಯಿತರಾದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದ 1 ಸಾವಿರಕ್ಕಿಂತೂ ಹೆಚ್ಚು ಸದಸ್ಯರಿರುವಂತಹ, ಮೂರು ಸಾವಿರದಷ್ಟು ಸದಸ್ಯರಿರುವಂತಹ ಜೇಸಿಐನ 2023ನೇ ಸಾಲಿನ ವಲಯಾಧ್ಯಕ್ಷರಾಗಿ ಪುರುಷೋತ್ತಮ್ ಶೆಟ್ಟಿ ರವರು ಆಯ್ಕೆಯಾಗಿದ್ದಾರೆ.


































