ಪುತ್ತೂರು: ಮೂಡಂಬೈಲು ರವಿ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಮೂಡಂಬೈಲು ರವಿ ಶೆಟ್ಟಿಯವರಿಗೆ ‘ಹುಟ್ಟೂರ ಸನ್ಮಾನ’ ಕಾರ್ಯಕ್ರಮ ನ.12 ರಂದು ಮುಂಡೂರು, ಪಜಿಮಣ್ಣು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯಲಿದ್ದು., ಈ ಹಿನ್ನೆಲೆ ಪೂರ್ವಭಾವಿ ಸಭೆ ನ.7 ರಂದು ನಡೆಯಿತು.


ನ.12 ರಂದು ಸಂಜೆ 4.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಗುವುದು ಹಾಗೂ ಕಾರ್ಯಕ್ರಮ ಇನ್ನಿತರ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದು, ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಭಾಸ್ಕರ್ ಆಚಾರ್ ಹಿಂದಾರು, ಮುರಳೀಧರ ಭಟ್ ಬಂಗಾರಡ್ಕ, ಶ್ರೀರಂಗ ಶಾಸ್ತ್ರಿ ಮನಿಲ, ಬಾಲಕೃಷ್ಣ ಕಣ್ಣುರಾಯ, ಸದಾಶಿವ ಶೆಟ್ಟಿ ಪಟ್ಟೆ, ಸುಧೀರ್ ಶೆಟ್ಟಿ ಕಂಪ, ರತ್ನಾಕರ ರೈ ತಿಂಗಳಾಡಿ, ಶ್ರೀಕಾಂತ್ ಹಿಂದಾರು, ಅನಿಲ್ ಕುಮಾರ್ ಕಣ್ಣರ್ನೂಜಿ, ಬಾಲಚಂದ್ರ ಗೌಡ ಕಡ್ಯ, ಶಿವನಾಥ ರೈ ಮೇಗಿನಗುತ್ತು, ರಾಮಣ್ಣ ಗೌಡ ಕೆಡೆಂಜಿ, ಸದಾಶಿವ ಗೌಡ ಕೊಡಂಕಿಲ, ಸೇಸಪ್ಪ ಆಚಾರ್ಯ, ಉದಯ ಗೌಡ ಪಜಿಮಣ್ಣು, ಬಾಲಕೃಷ್ಣ ಪೂಜಾರಿ ಕುರೆಮಜಲು, ಜಯಮಾಲಾ, ರಜನಿ ಕಡ್ಯ, ಪ್ರಸಾದ್ ಬೈಪಡಿತ್ತಾರು, ಪುರುಷೋತ್ತಮ ಬಿ.ಕೆ., ಜಗದೀಶ ಕಲ್ಲಮ, ಧನಂಜಯ ಕಲ್ಲಮ, ನಿತಿನ್ ರೈ, ವಸಂತ ರೈ ಶಿಬರ, ಜಯಪ್ರಸಾದ್ ಮುಂಡೂರು, ರವಿಚಂದ್ರ ರೈ ಮುಂಡೂರು, ರಂಜಿತ್ ಹಿಂದಾರು ರವರನ್ನೊಳಗೊಂಡ ಅಭಿನಂದನಾ ಸಮಿತಿಯನ್ನು ರಚಿಸಲಾಯಿತು ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ರವರು ತಿಳಿಸಿದ್ದಾರೆ..


























