ಪುತ್ತೂರು: ಪ್ರತಿಷ್ಠಿತ ವಸತಿಗೃಹದಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ನ.7 ರಂದು ನಡೆದಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಲಾಗಿದೆ.
10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನ.7ರಂದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಸತಿ ನಿಲಯದ ಮೇಲ್ವಿಚಾರಕರು ಠಾಣೆಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿಗಳಿಬ್ಬರು ಮೈಸೂರು ಮೂಲದವರಾಗಿದ್ದು, ಪುತ್ತೂರಿನ ಪ್ರತಿಷ್ಠಿತ ವಸತಿಗೃಹದಲ್ಲಿದ್ದುಕೊಂಡು 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಹಾಸ್ಟೆಲ್ನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಬಳಸುವರೇ ಅವಕಾಶ ಇಲ್ಲದೇ ಇದ್ದು, ಮೊಬೈಲ್ ಪೋನ್ ಅವಶ್ಯಕತೆ ಇದ್ದಲ್ಲಿ ವಾರ್ಡನ್ ನೀಡುತ್ತಿದ್ದು, ನ. 07 ರಂದು ವಾರ್ಡನ್ ಗೆ ವಿದ್ಯಾರ್ಥಿಯೋರ್ವನಲ್ಲಿ ಮೊಬೈಲ್ ಫೋನ್ ಇರುವ ವಿಚಾರ ತಿಳಿದು ಮೊಬೈಲ್ ಫೋನ್ನ್ನು ತೆಗೆದಿರಿಸಿದ್ದರು, ಬಳಿಕ ಸಾಯಂಕಾಲ ನೋಡಿದಾಗ ಇಬ್ಬರು ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಇಲ್ಲದೇ ಇರುವುದನ್ನು ಗಮನಿಸಿದ ವಾರ್ಡನ್ ಬೇರೆ ಮಕ್ಕಳಲ್ಲಿ ಕೇಳಿದಾಗ ಅವರು ನಾವು ಇಲ್ಲಿ ಇರೋದಿಲ್ಲ ಬೇರೆ ಕಡೆ ಕೆಲಸ ಮಾಡಿಕೊಂಡಿರುತ್ತೇವೆ ಎಂದು ಹೇಳಿ ಹೋಗಿರುವುದಾಗಿ ತಿಳಿಸಿದ್ದು, ಕಾಣೆಯಾದ ವಿದ್ಯಾರ್ಥಿಗಳ ಮನೆಯವರಲ್ಲಿ ವಿಚಾರಿಸಿದಾಗ ಅಲ್ಲಿಗೂ ತೆರಳಿಲ್ಲ ಎಂದು ತಿಳಿದು ಬಂದಿರುವುದಾಗಿದೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 40/2022 ಕಲಂ: 363 ಭಾ.ದಂ.ಸಂ ರಂತೆ ಪ್ರಕರಣ ದಾಖಲಾಗಿದೆ.


























