ಪುತ್ತೂರು : ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲ ಜೀವನ್ ಮಿಷನ್ ಇದರ ಶಿಲಾನ್ಯಾಸ ಕಾರ್ಯಕ್ರಮ, ಕಬಕ ಗ್ರಾಮದ ಭಾಗಗಳಲ್ಲಿ ಸುಮಾರು ರೂ.20 ಲಕ್ಷ ಅನುದಾನದ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮವನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ನೆರವೇರಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ದಿವ್ಯ ಪುರುಷೋತ್ತಮ, ಹರೀಶ್ ಬಿಜಾತ್ರೆ, ಕಬಕ ಪಂಚಾಯತ್ ಅಧ್ಯಕ್ಷರಾದ ವಿನಯಕುಮಾರ್ ಕಲ್ಲೇಗ, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಶಕ್ತಿಕೇಂದ್ರದ ಪ್ರಮುಖರಾದ ಜಯರಾಮ ನಕ್ಕರೆ, ಪಂಚಾಯತ್ ಉಪಾಧ್ಯಕ್ಷರಾದ ರುಕ್ಮಯ ಗೌಡ, ಮತ್ತು ಸದಸ್ಯರುಗಳು, ಅಧಿಕಾರಿ ವರ್ಗದವರು ಹಾಗೂ ಊರಿನ ಫಲಾನುಭವಿಗಳು ಉಪಸ್ಥಿತರಿದ್ದರು.