Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೆದಂಬಾಡಿ: ಹೆತ್ತ ತಾಯಿಯನ್ನೇ  ಅತ್ಯಾಚಾರಗೈದ ಮಗ..!! ಮಹಿಳೆ ಆಸ್ಪತ್ರೆಗೆ ದಾಖಲು

    ಮಂಗಳೂರು: ಕೆಲಸದ ನೆಪದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ..!!

    ಪಂಜಳ ನಿವಾಸಿ ಚಿನ್ನದ ಕೆಲಸಗಾರ ರಾಧಾಕೃಷ್ಣ ಹೃದಯಾಘಾತದಿಂದ ನಿಧನ..!!

    ಪಂಜಳ ನಿವಾಸಿ ಚಿನ್ನದ ಕೆಲಸಗಾರ ರಾಧಾಕೃಷ್ಣ ಹೃದಯಾಘಾತದಿಂದ ನಿಧನ..!!

    ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಬೈಕ್ ಅಪಘಾತ : ಯುವ ಛಾಯಾಗ್ರಾಹಕ ಮೃತ್ಯು..!!

    ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಬೈಕ್ ಅಪಘಾತ : ಯುವ ಛಾಯಾಗ್ರಾಹಕ ಮೃತ್ಯು..!!

    ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ – ವಿವಾಹಿತ ಅರೆಸ್ಟ್‌..!!

    ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ – ವಿವಾಹಿತ ಅರೆಸ್ಟ್‌..!!

    ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ: ಕತ್ತು ಸೀಳಿ ಬರ್ಬರವಾಗಿ ಕೊಲೆ..!!

    ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ: ಕತ್ತು ಸೀಳಿ ಬರ್ಬರವಾಗಿ ಕೊಲೆ..!!

    ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

    ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ : ವಿದ್ಯಾರ್ಥಿಗಳು ಯಶಸ್ಸಿನ ಸೂತ್ರವನ್ನರಿತು ಮುಂದುವರಿಯುವಂತಾಗಲಿ- ಡಾ. ಕೆ.ಎಂ. ಕೃಷ್ಣ ಭಟ್

November 10, 2022
in ಪುತ್ತೂರು
0
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ : ವಿದ್ಯಾರ್ಥಿಗಳು ಯಶಸ್ಸಿನ ಸೂತ್ರವನ್ನರಿತು ಮುಂದುವರಿಯುವಂತಾಗಲಿ- ಡಾ. ಕೆ.ಎಂ. ಕೃಷ್ಣ ಭಟ್
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸಮಾಜಕ್ಕೆ ಉಪಯೋಗವಾಗುವಂತ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಮಾಜದ ಏಳಿಗಾಗಿ ಶ್ರಮಿಸಬೇಕು. ಆಗ ಮಾತ್ರ ನಮ್ಮದೇಶದ ಏಳಿಗೆ ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಶಿಕ್ಷಣದ ಕಡೆಗೆ ಗಮನಹರಿಸಿ ಗುರಿಯನ್ನು ತಲುಪುವ ಪ್ರಯತ್ನ ಮಾಡಬೇಕು ಎಂದು ಸಕಲೇಶಪುರ ರೋಟರಿ ಶಾಲೆಯ ಮುಖ್ಯೋಪಾಧ್ಯಾಯ ಸುಮಂತ್ ಹೇಳಿದರು.

Advertisement
Advertisement
Advertisement

ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ನಾವು ಎಷ್ಟೇ ಎತ್ತರ ಬೆಳೆದರೂ,ಉನ್ನತ ಹುದ್ದೆಯಲ್ಲಿದ್ದರೂ ನಾವು ಕಲಿತ ಶಾಲೆ ಹಾಗೂ ವಿದ್ಯೆ ಕಲಿಸಿದ ಗುರುಗಳ ಬಗ್ಗೆ ಇರುವ ಗೌರವಕ್ಕೆ ಎಂದಿಗೂ ಕುಂದುಕೊರತೆ ಬರಬಾರದು. ಋಣಾತ್ಮಕ ಚಿಂತನೆಗಳ ಕಡೆಗೆ ಮನಸ್ಸು ವಾಲದಂತೆ ನೋಡಿಕೊಂಡು, ಕೋಪ ಮತ್ತು ಉದ್ರೇಕಗಳನ್ನು ನಿಯಂತ್ರಣ ಮಾಡಿವಿದ್ಯಾರ್ಥಿಜೀವನದಲ್ಲಿ ವಿದ್ಯಾರ್ಥಿಯಾಗಿಯೇ ಉಳಿದುಕೊಂಡು ದೇಶಕ್ಕೆಉತ್ತಮ ಪ್ರಜೆಯಾಗುವಂತಾಗಬೇಕು ಎಂದು ಹೇಳಿದರು.

Advertisement

ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ, ವ್ಯಕ್ತಿ ಗುರುತಿಸಲ್ಪಡುವುದು ಅವರ ವ್ಯಕ್ತಿತ್ವದಿಂದ ಮತ್ತು ಸಾಧನೆಯಿಂದಾಗಿದೆ.ಎಲ್ಲರಲ್ಲೂ ಅವರದೇ ಆದ ಪ್ರತಿಭೆಯಿದೆ. ಆದರೆ ಆ ಪ್ರತಿಭೆಯನ್ನು ಗುರುತಿಸಲು ಸೂಕ್ತ ವೇದಿಕೆ ಅಗತ್ಯ. ಆ ವೇದಿಕೆ ಲಭಿಸುವಾಗ, ಅವಕಾಶಗಳು ಒಲಿದು ಬರುವಾಗ ಬಳಸಿಕೊಳ್ಳುವ ಚಾಣಾಕ್ಷತೆ ವಿದ್ಯಾರ್ಥಿಗಳಲ್ಲಿರಬೇಕು. ಜ್ಞಾನ ಎನ್ನುವುದು ಅಂಗೈಯಲ್ಲಿದೆ. ಆದುದರಿಂದ ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ.ಯಾವ ದಾರಿಯಲ್ಲಿ ಸಾಗಬೇಕು ಎಂದು ದೃಢ ನಿಶ್ಚಯ ಮಾಡಿ, ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ,ಏಕಾಗ್ರತೆಯಿಂದ ಶ್ರಮ ಪಟ್ಟರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆಎಂ ಕೃಷ್ಣಭಟ್ ಮಾತನಾಡಿ, ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ಯಶಸ್ಸಿನ ಸೂತ್ರವನ್ನು ಮೊದಲಿಗೆ ತಿಳಿದುಕೊಳ್ಳಬೇಕು. ತಾವು ಮಾಡುವ ಕೆಲಸದಲ್ಲಿ ಪ್ರೀತಿ, ಕೌಶಲ್ಯ, ಮತ್ತು ಆತ್ಮವಿಶ್ವಾಸ ಇದ್ದರೆ ಮಾತ್ರ ಸಾಧನೆ ಸಾಧ್ಯವಾಗುವುದು. ಇದರೊಂದಿಗೆ ನಾವು ಮಾಡುವ ಕೆಲಸ ನಮಗೆ ಆತ್ಮಾನಂದ ನೀಡುವಂತಿರಬೇಕು. ಆ ಸಂದರ್ಭದಲ್ಲಿ ಸೋಲು ಎದುರಾಗುವುದು ಸಹಜ, ಆದರೆ ಆ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲೇರುವ ಹುಮ್ಮಸ್ಸು ವಿದ್ಯಾರ್ಥಿಗಳಲ್ಲಿರಬೇಕು. ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ಶಕ್ತಿ ವಿದ್ಯಾರ್ಥಿಗಳಿಗಿದೆ. ಆದುದರಿಂದ ಸಮಾಜ ಹಾಗೂ ದೇಶದ ನಿರ್ಮಾಣಕ್ಕೆ ಕೊಡುಗೆಗಳನ್ನು ನೀಡುವ ಹೊಣೆಗಾರಿಕೆ ಹೊತ್ತುಕೊಂಡು ಶ್ರಮಿಸುವ ಶಕ್ತಿ ವಿದ್ಯಾರ್ಥಿಗಳಿಗೆ ಸಿದ್ಧಿಯಾಗಲಿ ಎಂದು ಹೇಳಿದರು.

ಸಮಾರಂಭದಲ್ಲಿ ಶಿಕ್ಷಣಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಾಂಶುಪಾಲ ಮಹೇಶ ನಿಟಿಲಾಪುರ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ ಗೋಪಾಲಕೃಷ್ಣ ಭಟ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುದತ್ ನಾಯಕ್ , ಕಾರ್ಯದರ್ಶಿ ಕೀರ್ತನ್ ಉಪಸ್ಥಿತರಿದ್ದರು.

ಪದವಿಪೂರ್ವಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥ ಪರಮೇಶ್ವರ ಶರ್ಮ ಸ್ವಾಗತಿಸಿ, ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ದೇವಿಚರಣ್‌ ವಂದಿಸಿದರು. ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement
Previous Post

ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನರಿಮೊಗರು ಸಾಂದೀಪನಿ ವಿದ್ಯಾರ್ಥಿಗಳು

Next Post

ಮಂಗಳೂರು: ಖಾಸಗಿ ಬಸ್ ನಲ್ಲಿ ವೈದ್ಯೆ ಜೊತೆ ಅಸಭ್ಯ ವರ್ತನೆ : ಆರೋಪಿಯ ಬಂಧನ

OtherNews

ಪಂಜಳ ನಿವಾಸಿ ಚಿನ್ನದ ಕೆಲಸಗಾರ ರಾಧಾಕೃಷ್ಣ ಹೃದಯಾಘಾತದಿಂದ ನಿಧನ..!!
Featured

ಪಂಜಳ ನಿವಾಸಿ ಚಿನ್ನದ ಕೆಲಸಗಾರ ರಾಧಾಕೃಷ್ಣ ಹೃದಯಾಘಾತದಿಂದ ನಿಧನ..!!

March 14, 2026
ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!
Featured

ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

March 13, 2026
ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!
Featured

ಪುತ್ತೂರು: ಅಪ್ರಾಪ್ತ ಬಾಲಕ ಚಾಲನೆ ಮಾಡಿದ ಕಾರು ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ – ವಾಹನ ಮಾಲಕಿ ವಿರುದ್ಧ ಪ್ರಕರಣ..!!

March 13, 2026
ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!
ಪುತ್ತೂರು

ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

March 12, 2026
ತೋಟದಲ್ಲಿ ಜಾನುವಾರು ಓಡಿಸಲು ಹೋದ ವೇಳೆ ಬಿದ್ದು ಮಹಿಳೆ ಸಾವು..!!
Featured

ತೋಟದಲ್ಲಿ ಜಾನುವಾರು ಓಡಿಸಲು ಹೋದ ವೇಳೆ ಬಿದ್ದು ಮಹಿಳೆ ಸಾವು..!!

March 12, 2026
ಪುತ್ತೂರು: ಕೌಡಿಚ್ಚಾರು ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆ..!!!
ಕ್ರೈಮ್

ಪುತ್ತೂರು: ಕೌಡಿಚ್ಚಾರು ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆ..!!!

March 12, 2026

Leave a Reply Cancel reply

Your email address will not be published. Required fields are marked *

Recent News

ಕೆದಂಬಾಡಿ: ಹೆತ್ತ ತಾಯಿಯನ್ನೇ  ಅತ್ಯಾಚಾರಗೈದ ಮಗ..!! ಮಹಿಳೆ ಆಸ್ಪತ್ರೆಗೆ ದಾಖಲು

ಮಂಗಳೂರು: ಕೆಲಸದ ನೆಪದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ..!!

March 14, 2026
ಪಂಜಳ ನಿವಾಸಿ ಚಿನ್ನದ ಕೆಲಸಗಾರ ರಾಧಾಕೃಷ್ಣ ಹೃದಯಾಘಾತದಿಂದ ನಿಧನ..!!

ಪಂಜಳ ನಿವಾಸಿ ಚಿನ್ನದ ಕೆಲಸಗಾರ ರಾಧಾಕೃಷ್ಣ ಹೃದಯಾಘಾತದಿಂದ ನಿಧನ..!!

March 14, 2026
ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಬೈಕ್ ಅಪಘಾತ : ಯುವ ಛಾಯಾಗ್ರಾಹಕ ಮೃತ್ಯು..!!

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಬೈಕ್ ಅಪಘಾತ : ಯುವ ಛಾಯಾಗ್ರಾಹಕ ಮೃತ್ಯು..!!

March 14, 2026
ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ – ವಿವಾಹಿತ ಅರೆಸ್ಟ್‌..!!

ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ – ವಿವಾಹಿತ ಅರೆಸ್ಟ್‌..!!

March 14, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page