ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವರ ವಾರ್ಷಿಕ ಜಾತ್ರೋತ್ಸವ ಹಾಗೂ ದೈವಗಳ ನೇಮೊತ್ಸವವು ಡಿ.10 ಮತ್ತು 11 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರದ ತಂತ್ರಿಗಳಾದ ಪ್ರೀತಮ್ ಪುತ್ತೂರಾಯರ ಹಾಗೂ ಕ್ಷೇತ್ರದ ಅಧ್ಯಕ್ಷರಾದ ಗಂಗಾಧರ ಅಮೀನ್ ಹೊಸಮನೆ ಬಿಡುಗಡೆಗೊಳಿಸಿ., ಜಾತ್ರೋತ್ಸವದ ರೂಪುರೇಷೆಗಳನ್ನು ತಿಳಿಸಿ, ಶುಭಹಾರೈಸಿದರು

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ಸಿ ಟಿ ಸುರೇಶ್, ಕಾರ್ಯದರ್ಶಿ ಜಯಂತ್ ಶೆಟ್ಟಿ ಕಂಬಳತಡ್ಡ, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಪೂರ್ಣಿಮಾ ಶೆಟ್ಟಿ, ವಿಕ್ರಂ ಜೈನ್ ಬಾರಿಕೆ, ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ಸಂತೋಷ್ ಸುವರ್ಣ ಮೇರ್ಲ, ಶ್ರೀ ಅಮ್ಮನವರ ದೇವಸ್ಥಾನದ ಕಾರ್ಯದರ್ಶಿ ಸುರೇಶ್ ಪೆಲತ್ತಡಿ, ಧನಂಜಯ ಶೆಟ್ಟಿ ಮೇರ್ಲ, ತಾರಾನಾಥ್ ಮೇರ್ಲ, ಆನಂದ ಅಮೀನ್ ಹೊಸಮನೆ, ಶೇಷಪ್ಪ ಗೌಡ (ಪಿ.ಎಸ್.ಐ), ಧನುಷ್ ಹೊಸಮನೆ, ಪವನ್ ಶೆಟ್ಟಿ, ಶ್ರೀಚಕ್ರ ರಾಜರಾಜೇಶ್ವರಿ ಮಹಿಳಾ ಮಂಡಳಿ ಹಾಗೂ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಸದಸ್ಯರು ಮತ್ತು ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.



























