ಪುತ್ತೂರು: ನಾಟ್ಯರಂಗದ ಕಲಾವಿದರು ಪ್ರಸ್ತುತ ಪಡಿಸುವ ಯಶೋಧರೆ ನೃತ್ಯ ರೂಪಕವು ನ.12 ರಂದು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ.

ನಾಟ್ಯರಂಗದ ನೃತಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಈ ನೃತ್ಯರೂಪಕವನ್ನು ನಿರ್ದೇಶಿಸಿರುತ್ತಾರೆ.

ಯಶೋಧರೆ ನೃತ್ಯರೂಪಕಕ್ಕೆ ಗಂಗಾಧರ ಬೆಳ್ಳಾರೆಯವರ ಸಾಹಿತ್ಯವಿದ್ದು, ಗುರುರಾಜ್ ಮಂಗಳೂರು ಸಂಗೀತ ನಿರ್ದೇಶಿಸಿರುತ್ತಾರೆ. ಪ್ರಣವ ಬೆಳ್ಳಾರೆಯವರು ಕಲಾಕೃತಿಗಳನ್ನು ನೃತ್ಯರೂಪಕ್ಕಾಗಿ ರಚಿಸಿರುತ್ತಾರೆ. ನಾಟ್ಯರಂಗದ ಸುಮಾರು ಹದಿನೈದು ಕಲಾವಿದರು ಈ ರೂಪಕದಲ್ಲಿ ಭಾಗವಹಿಸಿರುತ್ತಾರೆ.



























