ಪುತ್ತೂರು: ವಸತಿ ಶಾಲೆಯೊಂದರಿಂದ ನಾಪತ್ತೆಯಾದ ಇಬ್ಬರು ಬಾಲಕರನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಗಿದೆ.
ನ.7 ರಂದು ಸಾಯಂಕಾಲ ಪುತ್ತೂರಿನ ಬಾಲಕರ ವಸತಿ ಶಾಲೆಯಿಂದ ಇಬ್ಬರು ಬಾಲಕರು ಕಾಣೆಯಾದ ಬಗ್ಗೆ ನ.8 ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಲಕರಿಬ್ಬರು ಪುತ್ತೂರು ರೈಲ್ವೆ ನಿಲ್ದಾಣದ ಕಡೆಗೆ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರಂತೆ ಪೊಲೀಸರ ತಂಡ ಸಕಲೇಶಪುರ, ಮೈಸೂರು, ಬೆಂಗಳೂರಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿತ್ತು.
ರೈಲ್ವೆ ಪೊಲೀಸ್, ಸಿಆರ್ಪಿಎಫ್, ರೈಲ್ವೆ ಅಧಿಕಾರಿಗಳಿಗೂ ಮಕ್ಕಳ ವಿವರ ನೀಡಲಾಗಿತ್ತು. ಅದರಂತೆ ನ.10 ರಂದು ಮಕ್ಕಳು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿದ್ದಾರೆ. ಅಲ್ಲಿಂದ ಬೆಂಗಳೂರು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. ಮಕ್ಕಳನ್ನು ವಿಚಾರಿಸಿ ಪೋಷಕರಿಗೆ ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


























