ಪುತ್ತೂರು : ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ವಿದ್ಯಾಲಯ ಹೆಬ್ರಿಯಲ್ಲಿ ನ.2 ರಂದು ಆಯೋಜಿಸಲಾದ ವಿದ್ಯಾಭಾರತಿ ಪ್ರಾಂತ ಹಾಗೂ ಕ್ಷೇತ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ)ಯ 9ನೇ ತರಗತಿ ವಿದ್ಯಾರ್ಥಿ ಆಯುಷ್
ನರೇಂದ್ರ (ಪ್ರಮೋದ್ ಕುಮಾರ್ ಕೆ. ಮತ್ತು ಡಾ.ಚಾಂದಿನಿ
ದಂಪತಿಯ ಪುತ್ರ)17ರ ವಯೋಮಿತಿಯಲ್ಲಿ ಹಾಗೂ 7 ನೇ ತರಗತಿಯ ಕೃತಿ ರೈ (ಭಾಸ್ಕರ್ ರೈ ಮತ್ತು ಶಾರದಾ ಬಿ. ರೈ
ದಂಪತಿಯ ಪುತ್ರಿ) 14ರ ವಯೋಮಿತಿಯಲ್ಲಿ, ರಾಷ್ಟ್ರಮಟ್ಟಕ್ಕೆ
ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.


























