ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಜೀವನಿ ಫೌಂಡೇಶನ್ ಬೆಂಗಳೂರು ಹಾಗೂ ಅಭಿಜ್ಞಾ ಆರ್ ಸಿ ಎಮ್ ಭಾರತೀಯ ಮಳಿಗೆ, ಕುಡ್ತಮುಗೇರು ಇದರ ಸಂಯುಕ್ತ ಆಶ್ರಯದಲ್ಲಿ ಹೆಣ್ಣು ಮಕ್ಕಳ ಆಂತರಿಕ ಆರೋಗ್ಯ ಹಾಗೂ ಬಾಹ್ಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಶಾಲಾ ವಿದ್ಯಾರ್ಥಿನಿಯರಿಗೆ ಮಾಹಿತಿಯನ್ನು ನೀಡಲಾಯಿತು.

ರಕ್ಷಾ ಕಳಸ ರವರು ಮಾಸಿಕ ಋತುಸ್ರಾವ ಮತ್ತು ಶುಚಿತ್ವದ ಬಗ್ಗೆ ತಿಳಿಸುತ್ತಾ ಗುಣಮಟ್ಟದ ಹಾಗೂ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸುವ ಬಗ್ಗೆ ತಿಳಿಸಿಕೊಟ್ಟರು. ಹರಿಗಣೇಶ ರವರು ಕೀ ಸೋಲ್ ಪ್ಯಾಡ್ ಗಳ ಪ್ರತ್ಯಕ್ಷಿಕ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಆಡಳಿತಧಿಕಾರಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.




























