ಪುತ್ತೂರು: ಒಂದು ಮಿಸ್ ಕಾಲ್ ಕೊಟ್ಟರೆ ಉದ್ಯೋಗ ನೋಂದಣಿ – ಜಿ ಎಲ್ ಆಚಾರ್ಯ ಸಂಸ್ಥೆಯ ಮುಖ್ಯಸ್ಥ ಬಲರಾಮ ಆಚಾರ್ಯ ರವರು ಉದ್ಯೋಗ ಮೇಳ ನೋಂದಾವಣೆಗೆ ಚಾಲನೆ ನೀಡಲಿದ್ದಾರೆ.
ಕಳೆದ 5 ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿರುವ ಶಿಕ್ಷಣ ಸಂಸ್ಥೆ ‘ವಿದ್ಯಾಮಾತಾ ಫೌಂಡೇಶನ್’ 2017 ಮತ್ತು 2019 ರ ಸಾಲಿನಲ್ಲಿ ಎರಡು ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಪುತ್ತೂರಿನಲ್ಲಿ ಆಯೋಜಿಸಿ ಸುಮಾರು 2500 ಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳಿಗೆ ನೂರಾರು ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಟ್ಟಿದ್ದನ್ನು ಸ್ಮರಿಸಿಕೊಳ್ಳಬಹುದು. ಅಲ್ಲದೇ ಪ್ರತೀ ವಾರ ಪುತ್ತೂರಿನ ಎಪಿಯಂಸಿ ರಸ್ತೆಯಲ್ಲಿರುವ ತಮ್ಮ ಶಿಕ್ಷಣ ಸಂಸ್ಥೆ ಮತ್ತು ಬೆಂಗಳೂರಿನಲ್ಲಿರುವ ವಿದ್ಯಾಮಾತಾದ ಪ್ರಧಾನ ಕಛೇರಿಯ ಮೂಲಕವೂ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸುವುದರ ಮೂಲಕ ದಾರಿದೀಪವಾಗಿದೆ. ತನ್ನ ಸಹಸಂಸ್ಥೆ ‘ವಿದ್ಯಾಮಾತಾ ಅಕಾಡೆಮಿ’ಯ ಮೂಲಕ ಐಎಎಸ್ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಿದ್ದು, 40ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾಮಾತಾ ಸಂಸ್ಥೆಯು 5 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ 3ನೇ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲು ಯೋಜಿಸಿದ್ದು, ನೋಂದಾವಣೆ ಮಾಡಲು 9772294246 ನಂಬರಿಗೆ ಮಿಸ್ ಕಾಲ್ ಕೊಡಬಹುದು.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೆಕ್ಸ್, ಎಪಿಯಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201, ಫೋನ್ ನಂ. 9148935808 / 8590773486 ನ್ನು ಸಂಪರ್ಕಿಸಬಹುದು.


























