ಪುತ್ತೂರು: ರೋಟರ್ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಯುವ, ಡಾ.ನಝೀರ್ ಡಯಾಬಿಟಿಸ್ ಸೆಂಟರ್, ಇನ್ನರ್ ವೀಲ್ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ, ಕನ್ನಡ ಸಾಹಿತ್ಯ ಪರಿಷತ್, ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಉಚಿತ ಮಧುಮೇಹ ತಪಾಸಣೆ ಮತ್ತು ಮಾಹಿತಿ ಶಿಬಿರ, ಪ್ರೊಜೆಕ್ಟ್ ಸ್ವೀಟ್ ಚೈಲ್ಡ್-ಮಕ್ಕಳ ಸಮ್ಮಿಲನ, ಶಾಲಾ ಕಾಲೇಜುಗಳಲ್ಲಿ ಟೈಪ್-1 ಮಧುಮೇಹದ ಬಗೆಗಿನ ಮಾಹಿತಿ ಶಿಬಿರ-ಸರಣಿಗೆ ಚಾಲನೆ ನ.14 ರಂದು ಮಹಾವೀರ ವೆಂಚರ್ಸ್ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರಸಭೆ ಆಯುಕ್ತರಾದ ಮಧು ಎಸ್. ಮನೋಹರ್ ರವರು ನೆರವೇರಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕರಾದ ಸಂಜೀವ ಮಠಂದೂರು ರವರು ಆಗಮಿಸಲಿದ್ದಾರೆ.
ಜಾಥಾವು ದರ್ಬೆ ವೃತ್ತದಿಂದ ಬೆಳ್ಳಿಗೆ 7.30ಕ್ಕೆ ಹೊರಟು, ಬೊಳುವಾರು, ಮಹಾವೀರ ವೆಂಚರ್ಸ್, ಪುತ್ತೂರು ತನಕ ಹೋಗಿ ಹಿಂದಿರುಗಲಿದೆ. ಹೆಚ್ಚಿನ ಮಾಹಿತಿಗಾಗಿ 9481451929 ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























