ಇಡೀ ದೇಶದಲ್ಲೇ ಆತಂಕ ಸೃಷ್ಟಿಸಿದ್ದ ಶ್ರದ್ದಾ ವಾಲ್ಕರ್ ಕೊಲೆ ಪ್ರಕರಣದ ಬಗ್ಗೆ ದಿನಕ್ಕೊಂದು ಆತಂಕಕಾರಿ ಮಾಹಿತಿಗಳು ಲಭ್ಯವಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ತಾನೊಬ್ಬ ಸಭ್ಯನಂತೆ ಕಾಣಿಸಿಕೊಂಡಿದ್ದ ಆರೋಪಿ ಅಫ್ತಾಬ್‌ನ ನಿಜಜೀವನದ ಕರಾಳಮುಖ ಬಹಿರಂಗಗೊಳ್ಳುತ್ತಲೇ ಹೋಗುತ್ತಿದೆ.
ಲಿವ್ ಇನ್ ಪ್ರೇಯಸಿ ಶ್ರದ್ದಾ ಮದವೆಯಾಗುವಂತೆ ಒತ್ತಾಯಿಸಿದ್ದಕ್ಕಾಗಿ ಆಕೆಯನ್ನು ಕೊಲೆಗೈದು ದೇಹವನ್ನು 35 ತುಂಡಾಗಿ ಕತ್ತರಿಸಿದ ನರಹಂತಕ ಅಫ್ತಾಬ್ ಅಮೀನ್ ಒಬ್ಬ ವಿಕೃತ ಮನುಷ್ಯನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮೂಲತಃ ಮುಂಬೈನ ವಸೈಯವನಾದ ಈತ ಫುಡ್ ಬ್ಲಾಗರ್ ಎನಿಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ 28,000 ಅನುಯಾಯಿಗಳನ್ನು ಕೂಡಾ ಹೊಂದಿದ್ದ.
ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಲೇ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಹಾರ ಸಂಬಂಧಿ ಫೋಟೋಗಳು, ರೆಸ್ಟೋರೆಂಟ್‌ಗಳ ವಿಮರ್ಶೆಗಳನ್ನು ಹಾಕುತ್ತಿದ್ದ. ಇನ್ನು ಬಾಡಿಬಿಲ್ಡಿಂಗ್ ಚಿತ್ರ ಹಾಕಿಕೊಂಡು ಹೆಣ್ಮಕ್ಕಳನ್ನು ಆಕರ್ಷಿಸುತ್ತಿದ್ದ. ಇನ್‌ಸ್ಟಾಗ್ರಾಂನಲ್ಲಿ ತನ್ನನ್ನು ತಾನು ಪ್ರಾಣಿಪ್ರಿಯನೆಂದು ಬಿಂಬಿಸಿಕೊಂಡಿದ್ದ ನರಹಂತಕ ಫುಟ್ಬಾಲ್ ಅಭಿಮಾನಿಯೆಂದೂ ಚಿತ್ರಗಳನ್ನು ಹಾಕಿಕೊಂಡಿದ್ದ. ಸಾಮಾಜಿಕ ಕಾಳಜಿಯುಳ್ಳ ಪೋಸ್ಟ್ ಹಾಕುತ್ತಿದ್ದ ಈತ ಯುವತಿಯರ ಮೇಲಿನ ದೌರ್ಜನ್ಯ ಖಂಡಿಸಿ ಪೋಸ್ಟ್ ಹಂಚಿಕೊಳ್ಳುತ್ತಿದ್ದ.
ಒಂದು ಕಡೆ ಲವ್ ಜಿಹಾದ್ ಮ್ಯಾಟರ್ ಸದ್ದು ಮಾಡ್ತಿದ್ರೆ ಅತ್ತ ಕಡೆಯಲ್ಲಿ ಪಾಪಿಯ ಮತ್ತಷ್ಟು ಸ್ಪೋಟಕ ವಿಚಾರಗಳು ಹೊರ ಬರಲು ಶುರುವಾಗಿದೆ. ಅದರಲ್ಲೂ ಡೇಟಿಂಗ್ ಆಪ್ ಮೂಲಕ ಇಬ್ಬರು ಪರಿಚಯ ಆದಾಗಿನಿಂದ ಹಿಡಿದು ಹತ್ಯೆಯಾಗುವ ತನಕ, ಹತ್ಯೆ ಮಾಡಿ ಸುಳಿವು ಸಿಗದಂತೆ ಪ್ಲಾನ್ ಮಾಡಿದ ತನಕ ಎಲ್ಲಾ ವಿಚಾರಗಳು ಕೂಡ ರಿವೀಲ್ ಆಗಿದೆ.
ಮೋಸದ ಹೆಜ್ಜೆ
- 2018ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಶ್ರದ್ಧಾ ಪರಿಚಯ, ಪ್ರೀತಿ
- 2019ರಿಂದ ಒಂದೇ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡ್ತಿದ್ದ ಜೋಡಿ
- ಶ್ರದ್ಧಾ ಜೊತೆ ಲವ್ ಆದ್ಮೇಲೂ ಹಲವು ಯುವತಿಯರ ಜೊತೆ ಕ್ಲೋಸ್
- ಅಫ್ಲಾಬ್ ಫೋನ್ ಜಿಪಿಎಸ್ ಹಾಕಿ ಶ್ರದ್ಧಾ ಟ್ರೇಸ್ ಮಾಡ್ತಿದ್ಲಂತೆ
- ಅಫ್ಲಾಬ್ ಎಲ್ಲೆಲ್ಲಿ ಹೋಗ್ತಿದ್ದ, ಅಫ್ಲಾಪ್ ಚಲನವಲನದ ಮೇಲೆ ಕಣ್ಣು
- ಡೇಟಿಂಗ್ ಆ್ಯಪ್ ಮೂಲಕ ಮತ್ತೊಬ್ಬ ಯುವತಿ ಪರಿಚಯ
- ತಾನಿದ್ದ ರೂಮ್‌ಗೆ ಮತ್ತೊಬ್ಬಳು ಯುವತಿಯನ್ನ ಕರೆತಂದಿದ್ದ
- ವಿಚಾರ ಗೊತ್ತಾದ್ ಮೇಲೆ ತನ್ನನ್ನ ಮದುವೆಯಾಗುವಂತೆ ಒತ್ತಾಯ
ಅದಾಗ್ಲೆ ಹಲವು ಸುಂದರಿಯರ ಸೆರಗಿನ ಹಿಂದೆ ಸುತ್ತುತ್ತಿದ್ದ ಪಾಪಿಗೆ ಈ ವಿಚಾರ ಕಿರಿಕಿರಿಯಾಗಿದೆ. ಮದುವೆಯಾಗು ಅಂದಿದ್ದು, ಈ ಕಿರಾತಕನ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಈಕೆಯನ್ನ ಬದುಕಲು ಬಿಟ್ರೆ ತನ್ನ ಅಡ್ಡದಾರಿಗೆ ಮುಳ್ಳಾಗ್ತಾಳೇ ಅಂದುಕೊಂಡು, ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ದೇಹವನ್ನ 35 ಪೀಸ್ ಮಾಡಿ, ದೆಹಲಿಯ ಬೀದಿ ಬೀದಿಯಲ್ಲಿ ಎಸೆದಿದ್ದಾನೆ.
ಈ ಪಾಪಿ ಅದೆಂಥಾ ಕಿಲಾಡಿ ಅಂದ್ರೆ, ಹತ್ಯೆ ಮಾಡಿದಲ್ಲದೆ, ಕ್ರೂರ ಕೃತ್ಯದ ಬಳಿಕ ವಿಚಾರ ಯಾರಿಗೂ ಗೊತ್ತಾಗದಿರಲು ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಹತ್ಯೆಯ ಬಳಿಕವೂ ಅನುಮಾನ ಬಾರದಂತೆ ಎಚ್ಚರ ವಹಿಸಿದ್ದಾನೆ. ಶ್ರದ್ಧಾ ಕೊಲೆಯ ನಂತರ ಅಫ್ತಾಬ್ ಆಕೆಯ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಮಾಡ್ತಿದ್ದ. ಶ್ರದ್ಧಾ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನ ಅಫ್ತಾಬ್ ಪೇ ಮಾಡ್ತಿದ್ದ. ಮುಂದೆ ಆಕೆಯ ಸೋಶಿಯಲ್
ಮೀಡಿಯಾ ಅಕೌಂಟ್‌ಗೆ ಲಾಗ್ ಇನ್ ಆಗಿ, ಶ್ರದ್ಧಾಳಿಗೆ ಬರ್ತಿದ್ದ ಮೆಸೇಜ್‌ಗಳಿಗೆ ಉತ್ತರ ಕೊಡ್ತಿದ್ದ. ಅಲ್ಲದೇ ಶ್ರದ್ಧಾಳ ಅಕೌಂಟ್‌ನಿಂದ ಅಫ್ತಾಬ್ ಪೋಸ್ಟ್ ಕೂಡ ಮಾಡ್ತಿದ್ದ. ಶ್ರದ್ಧಾ ಸ್ನೇಹಿತರಿಗೂ ಈಕೆಯ ಅಕೌಂಟ್‌ನಿಂದ ಮೆಸೇಜ್ ಮಾಡಿ, ಈ ಮೂಲಕ ಶ್ರದ್ಧಾ ಇನ್ನೂ ಕೂಡ ಬದುಕಿದ್ದಾಳೆ ಅನ್ನೋದನ್ನ ಬಿಂಬಿಸಿದ್ದ.
ಶ್ರದ್ಧಾ ಸ್ನೇಹಿತರಿಗೆ, ಈಕೆಯ ಖಾತೆಯಿಂದ ಸಂದೇಶಗಳು ಬರ್ತಿದ್ದ ಕಾರಣ, ಸ್ನೇಹಿತರಿಗೆ ದುರಂತದ ವಾಸನೆ ಅಷ್ಟು ಬೇಗ ಬಡಿದಿಲ್ಲ. ಅಲ್ಲದೇ ಈಕೆಯ ಅಕೌಂಟ್‌ನಿಂದ ಶ್ರದ್ಧಾಳ ಫೋಟೋಗಳು ಪೋಸ್ಟ್ ಆಗಿದ್ದ ಕಾರಣ, ಶ್ರದ್ಧಾ ಹೆತ್ತವರಿಗೂ ಯಾವುದೇ ಸಂದೇಹ ಬಂದಿಲ್ಲ. ಮಾಡಿರುವ ಪಾಪವನ್ನ ಎಷ್ಟು ದಿನ ಎಂದು ಮುಚ್ಚಿಡಲು ಸಾಧ್ಯ ಅಲ್ವಾ.!!?? ಆರಂಭದಲ್ಲಿ ಎಲ್ಲವನ್ನೂ ಚಾಚು ತಪ್ಪದೇ ಮಾಡ್ತಿದ್ದ ಕಿರಾತಕ, ಜನರಿಗೆ ನಂಬಿಕೆಯನ್ನ ಹೊದಿಸಿ ಸುಮ್ಮನಾಗಿದ್ದ. ಶ್ರದ್ಧಾ ಅಕೌಂಟ್‌ನಿಂದ ಪೋಸ್ಟ್ ಮಾಡೋದನ್ನ ನಿಲ್ಲಿಸಿದ್ದ. ಶ್ರದ್ಧಾ ಸ್ನೇಹಿತರಿಗೆ ರಿಫ್ಲೆ ಮಾಡೋದನ್ನ ಕೂಡ ಸ್ಟಾಪ್ ಮಾಡಿದ್ದ. ಇನ್ನೇಲೆ ಯಾರಿಗೂ ಕೂಡ ತನ್ನ ಕೃತ್ಯದ ಬಗ್ಗೆ ಡೌಟ್ ಬರಲ್ಲ ಎಂದು ಸುಮ್ಮನಾಗಿದ್ದ.. ಆದ್ರೆ ಶ್ರದ್ಧಾಳ ಅಕೌಂಟ್‌ನಿಂದ ಅಪ್ಲೋಡ್ ಆಗಿದ್ದ ಪೋಸ್ಟ್ ಗಳು ಸ್ಟಾಪ್ ಆಗಿದ್ರಿಂದಲೇ ಸ್ನೇಹಿತರೂ ಹಾಗೂ ಈಕೆಯ ಹೆತ್ತವರಿಗೆ ಡೌಟ್ ಶುರುವಾಗಿದೆ. ಇದೇ ಅನುಮಾನದ ಹಿಂದೆ ಹೊರಟಾಗ್ಲೆ ಪ್ರಕರಣದ ಹಿಂದಿನ ಕರಾಳ ಸತ್ಯ ಬಯಲಾಗಿದೆ.
ಸ್ನೇಹಿತನಿಗೆ ಮೆಸೇಜ್ ಮಾಡಿದ ಶ್ರದ್ಧಾ ಹೇಳಿದ್ದೇನು.!!?
ಶ್ರದ್ಧಾ ಅಫ್ಲಾಬ್‌ನ ಪ್ರೀತಿಯ ನಾಟಕವನ್ನ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ದಿನಗಳೇ ಉರುಳಿತ್ತು. ಅದು ಅರಿವಿಗೆ ಬರುವಷ್ಟರಲ್ಲಿ ಶ್ರದ್ಧಾ ದುರಂತದ ಕೊನೆಯ ಮೆಟ್ಟಿಲ ಮೇಲೆ ನಿಂತಿದ್ಲು. ಆದ್ರೂ ಕೂಡ ತನ್ನದು ಪವಿತ್ರ ಪ್ರೀತಿ ಎಂದು ಕೊಂಡೇ ಪ್ರಿಯಕರನ ರೂಪದಲ್ಲಿದ್ದ ಹಂತಕನ ಜೊತೆ ಹೆಜ್ಜೆ ಮೇಲೆ ಹೆಜ್ಜೆ ಹಾಕಿದ್ಲು. ಇದಾದ ಕೆಲ ದಿನದಲ್ಲಿಯೇ ಅಫ್ತಾಬ್ ಅಂತರಾಳದಲ್ಲಿದ್ದ ರಾಕ್ಷಸೀಯ ಕೃತ್ಯದ ಬಗ್ಗೆ ಅರಿವಾಗ ತೊಡಗಿದೆ. ಶ್ರದ್ಧಾ ಅಫ್ತಾಬ್ ನನ್ನ ಬಿಟ್ಟು ಬರಲು ನಿರ್ಧರಿಸಿದ್ಲಂತೆ. ಈ ಎಲ್ಲಾ ವಿಚಾರವನ್ನ ಸ್ವತಃ ಶ್ರದ್ಧಾ ಸ್ನೇಹಿತ ಹೇಳಿದ್ದಾನೆ.
ಶ್ರದ್ಧಾ ನನಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದು. ನನ್ನನ್ನು ಈ ನರಕದ ಕೂಪದಿಂದ ಕರೆದುಕೊಂಡು ಹೋಗು. ಇಲ್ಲದಿದ್ರೆ ಅಫ್ತಾಬ್ ನನ್ನನ್ನ ಕೊಲ್ಲುತ್ತಾನೆಂದಿದ್ಲು. ಈ ವೇಳೆ ನಾನು ಅಫ್ತಾಬ್‌ಗೆ ಎಚ್ಚರಿಕೆ ನೀಡ್ಡೆ. ಇದೇ ರೀತಿಯಲ್ಲಿ ಮುಂದುವರೆದ್ರೆ ಪೊಲೀಸ್ ಕಂಪ್ಲೇಟ್ ಕೊಡುವ ವಾರ್ನಿಂಗ್ ಕೊಟ್ಟೆ. ಆದ್ರೆ ಶ್ರದ್ಧಾ ಹಾಗೂ ಅಫ್ತಾಬ್ ಪರಸ್ಪರ ಅನ್ಯಧರ್ಮದವರಾಗಿದ್ದ ಕಾರಣ, ನಾನು ಕೇಸ್ ಕೊಡಲು ಹಿಂದೇಟು
ಹಾಕಿದೆ. ಕೇಸ್ ಕೊಟ್ಟರೆ ಇವರ ಪ್ರೀತಿಗೆ ತೊಂದ್ರೆಯಾಗೋದೆಂದು ಈ ನಿರ್ಧಾರ ತೆಗೆದುಕೊಂಡೆ. ಶ್ರದ್ಧಾ ದಿನ ಕಳೆದಂತೆ ಅಫ್ತಾಬ್ ನನ್ನ ತೊರೆಯಲು ನಿರ್ಧರಿಸಿದ್ಲು. ಮೇ ತಿಂಗಳಲ್ಲಿ ಶ್ರದ್ಧಾ ಜೊತೆ ಕೊನೆಯದಾಗಿ ಮಾತನಾಡಿದ್ದೆ. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಶ್ರದ್ಧಾಳನ್ನ ಸಂಪರ್ಕಿಸಲು ಪ್ರಯತ್ನಿಸಿದೆ. ಬಟ್ ಅದು ಸಾಧ್ಯವಾಗಿಲ್ಲ – ಮೃತ ಶ್ರದ್ಧಾ ಸ್ನೇಹಿತ
ಮೃತಳ ಸ್ನೇಹಿತ ಸ್ಫೋಟಕ ವಿಚಾರವನ್ನ ಬಿಚ್ಚಿಟ್ಟಿದ್ದಾನೆ. ಪಾಪಿಯ ಅಸಲಿ ಮುಖ ಅನಾವರಣಗೊಳ್ತಿದ್ದಂಗೆ, ಶ್ರದ್ಧಾಳಿಗೆ ತಪ್ಪಿನ ಅರಿವಾಗ ತೊಡಗಿದೆ. ಅಷ್ಟರಲ್ಲಿಯೇ ಅಫ್ತಾಬ್ ನ ಬಲೆಯಲ್ಲಿ ಸಿಲುಕಿದ್ದ ಕಾರಣ, ಏನ್ ಮಾಡಲಾಗದ ಸ್ಥಿತಿಗೆ ಶ್ರದ್ಧಾ ತಲುಪಿದ್ಲು. ಹಾಗಾದ್ರೆ ಅಫ್ತಾಬ್ ನ ಅಸಲಿ ಮುಖ ಗೊತ್ತಾದ್ ಮೇಲೂ ಶ್ರದ್ಧಾ ಬಿಟ್ಟು ಬಂದಿಲ್ವೇಕೆ..!!?? ತನಿಖೆ ವೇಳೆ ಹಂತಕ ಅಫ್ತಾಬ್ ನ ಕರಾಳ ಮುಖ ಬಯಲಾಗಿದೆ.
ಅಫ್ತಾಬ್ ಟಾರ್ಚರ್ ಕೊಟ್ರೂ, ಈತನ ಮತ್ತೊಂದು ಮುಖವಾಡ ರಿವೀಲ್ ಆದ್ರೂ ಕೂಡ ಶ್ರದ್ಧಾ ಅದೊಂದು ಕಾರಣಕ್ಕೆ ಅಫ್ಲಾಬ್ ಜೊತೆಗಿದ್ಲು., ಅದು ಬೇರೆ ಏನು ಅಲ್ಲ, ಎಮೋಷನಲ್ ಬ್ಲ್ಯಾಕ್‌ಮೇಲ್.
ಅಫ್ತಾಬ್ ಶ್ರದ್ಧಾಳನ್ನು ಎಮೋಷನಲ್ ಆಗಿ ಕ್‌ಮೇಲ್ ಮಾಡಿದ್ದ. ನನ್ನನ್ನ ಬಿಟ್ಟು ಹೋದ್ರೆ ಆತ್ಮಹತ್ಯೆ ಮಾಡ್ಕೊಳ್ಳೋದಾಗಿ ಹೇಳಿದ್ದ. ಈತನ ಎಮೋಷನಲ್ ಬ್ಲಾಕ್‌ಮೇಲ್‌ಗೆ ಕರಗಿದ ಶ್ರದ್ಧಾ ಎಲ್ಲೂ ಹೋಗದೆ ಈತನ ಜೊತೆಯಲ್ಲಿಯೇ ಇದ್ಲು. ಆದರೆ ಇದೀಗ ನಡೆಯಬಾರದು ನಡೆದು ಹೋಗಿದೆ. ಪಾಪಿಯ ಕಣ್ಣೀರಿಗೆ ಮರುಳಾದ ಶ್ರದ್ಧಾ ಇದೀಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.


























