ಪುತ್ತೂರು: ‘ಈ ಬಾರಿ ಅಭ್ಯರ್ಥಿ ಸ್ಥಾನ ನನಗೇ ನೀಡುವುದಾಗಿ ಶಕುಂತಲಾ ಶೆಟ್ಟಿ ಅವರು ಮಹಾಲಿಂಗೇಶ್ವರ ದೇವರಲ್ಲಿ ಪ್ರಮಾಣ ಮಾಡಿ ಹೇಳಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಕಾವು ಹೇಮಾನಾಥ್ ಶೆಟ್ಟಿ ರವರು ಹೇಳಿಕೆ ನೀಡಿದ್ದು, ಈ ವಿಚಾರ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ಪ್ರತಿಕ್ರಿಯೆ ನೀಡಿದ್ದು, ‘ನನಗೆ ಕಾವು ಹೇಮಾನಾಥ್ ಶೆಟ್ಟಿ ರವರು ಸಿಕ್ಕಿದ್ದೆಲ್ಲಿ..!!?? ನಾನು ಅವರಿಗೆ ಆಣೆ ಪ್ರಮಾಣ ಮಾಡಿದ್ದೆಲ್ಲಿ’ ಎಂದು ಪ್ರಶ್ನಿಸಿದ್ದಾರೆ.
‘ಸುಮಾರು ವರುಷಗಳಿಂದ ನಮಗೆ ಮತ್ತು ಕಾವು ಹೇಮಾನಾಥ್ ಶೆಟ್ಟಿ ರವರಿಗೆ ಸರಿಯಾಗಿ ಮಾತುಕಥೆ ನಡೆದಿಲ್ಲ., ಈ ನಡುವೆ ಮಹಾಲಿಂಗೇಶ್ವರ ಸನ್ನಿಧಿಗೆ ನಾನು ಮತ್ತು ಅವರು ಜೊತೆಯಲ್ಲಿ ಹೋಗಿದ್ದು ಯಾವಾಗ..!??, ನಾನು ಹೇಳಿದ್ದು ಯಾವಾಗ.??? ಈ ಸಂದರ್ಭದಲ್ಲಿ ಅಲ್ಲಿ ಇದ್ದ ಅರ್ಚಕರು ಯಾರು..!? ಆಡಳಿತದವರು ಯಾರು..!? ಎಂದು ಪ್ರಶ್ನೆ ಮಾಡಿದ್ದಾರೆ.
ಹೇಮನಾಥ್ ಶೆಟ್ಟಿ ಯವರು ನಮ್ಮ ಯಾವುದೇ ವ್ಯವಹಾರದಲ್ಲಿ, ಸಮಾರಂಭದಲ್ಲಿ, ಯಾವುದರಲ್ಲೂ ಜೊತೆಗೆ ಇಲ್ಲ., ಮತ್ತೆ ಹೇಳುವುದೆಲ್ಲಿ ಆಣೆ ಮಾಡುವುದೆಲ್ಲಿ’..?? ಎಂದು ಅವರು ಪ್ರಶ್ನಿಸಿದ್ದಾರೆ.
‘ಕಾವು ಹೇಮಾನಾಥ್ ಶೆಟ್ಟಿ ಯವರು ಹತ್ತು ವರುಷದಿಂದ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ., ನಾನು ಆ ರೀತಿಯಾಗಿ ಹೇಳಿಲ್ಲ, ಮಹಾಲಿಂಗೇಶ್ವರ ಸನ್ನಿಧಿಗೆ ಹೋಗಿ ಪ್ರಮಾಣ ಮಾಡಿಯೂ ಇಲ್ಲ., ನನಗೆ ಯಾರಿಗೂ ಆಣೆ ಮಾತು ಕೊಡುವ ಅಭ್ಯಾಸವೂ ಇಲ್ಲ, ಅವರು ನಮ್ಮ ಕಚೇರಿಗೂ ಬರುವುದಿಲ್ಲ., ನಮ್ಮಲ್ಲಿ ಮಾತನಾಡುವುದು ಇಲ್ಲಾ., ಹೀಗೆಲ್ಲಾ ಇರುವಾಗ ಅವರು ನನಗೇ ಸಿಕ್ಕಿದ್ದೆಲ್ಲಿ..??, ನಾನು ಆಣೆ ಹಾಕಿದ್ದೆಲ್ಲಿ..!!? ನಾನು ಈ ರೀತಿಯಾಗಿ ಹೇಳಿಯೇ ಇಲ್ಲಾ, ಆಣೆ ಹಾಕಿಯೂ ಇಲ್ಲ’ ಎಂದು ಶಕುಂತಳಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ..