ಪುತ್ತೂರು: ದ್ವಿಚಕ್ರ ವಾಹನದ ಹಿಂಬದಿಯ ಟಯರ್ ಸ್ಫೋಟಗೊಂಡು ದಂಪತಿ ಮತ್ತು ಮಗು ಗಾಯಗೊಂಡ ಘಟನೆ ತಿಂಗಳಾಡಿ ಸಮೀಪದ ತ್ಯಾಗರಾಜನಗರದಲ್ಲಿ ನಡೆದಿದೆ.
ಕುಂಬ್ರದಿಂದ ತಿಂಗಳಾಡಿ ಕಡೆಗೆ ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ಸ್ಕೂಟರ್ ತ್ಯಾಗರಾಜನಗರದ ಸಮೀಪ ತಲುಪಿದಾಗ ಹಿಂಬದಿ ಟಯರ್ ಸ್ಫೋಟಗೊಂಡಿದೆ.
ಘಟನೆಯಿಂದಾಗಿ ಸ್ಕೂಟರ್ ನಲ್ಲಿದ್ದ ಮೂವರೂ ರಸ್ತೆಗೆಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.