ಮಂಜೇಶ್ವರ: ಮದರಸಾಗೆ ತೆರಳಿದ್ದ 9 ವರ್ಷದ ವಿದ್ಯಾರ್ಥಿನಿಯನ್ನು ವ್ಯಕ್ತಿಯೋರ್ವ ಮದ್ರಸಾ ಆವರಣದಲ್ಲೇ ಕೈಯಿಂದ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸುವಂತೆ ಎಸೆದ ಘಟನೆ ಮಂಜೇಶ್ವರದಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಘಟನೆಯಿಂದಾಗಿ ವಿದ್ಯಾರ್ಥಿನಿ ಲಿಯಾ ಫಾತಿಮಾ (9) ಗಾಯಗೊಂಡಿದ್ದು, ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕೃತ್ಯವೆಸೆಗಿದವನನ್ನು ಉದ್ಯಾವರ ನಿವಾಸಿ ಸಿದ್ಧಿಕ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವೀಡಿಯೋದಲ್ಲಿ, ವಿದ್ಯಾರ್ಥಿನಿ ಮದರಸಾಕ್ಕೆ ತೆರಳಿ ಹೊರ ಬರುತ್ತಿದ್ದಂತೆಯೇ ಮದರಸಾ ಅವರಣದ ಹೊರಗೆ ನಿಂತಿದ್ದ ವ್ಯಕ್ತಿ ನೇರವಾಗಿ ಬಂದು ಏಕಾಏಕಿ ಬಾಲಕಿಯನ್ನು ಎರಡೂ ಕೈಯಿಂದ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.