ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ ರಿ. ಸಿಟಿಗುಡ್ಡೆ ನೆಹರುನಗರ, ವಾಯ್ಸ್ ಆಫ್ ಆರಾಧನಾ ಸಂಭ್ರಮ ‘ಆರದಿರಲಿ ಬದುಕು ಆರಾಧನಾ’ ಉದ್ಘಾಟನಾ ಕಾರ್ಯಕ್ರಮ ನ.20 ರಂದು ಬ್ರಹ್ಮಶ್ರೀ ಸಮುದಾಯ ಭವನ, ಪುತ್ತೂರು (ಮೇಲಿನ ಹಾಲ್) ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ರವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರು, ಜನಪದ ಕಲಾವಿದರಾದ ಉದಯಕುಮಾರ್ ಲಾಯಿಲ ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು ಶ್ರೀ ಮಂಜುನಾಥ್ ಆಗ್ರೋ ಕೇರ್ ಮ್ಯಾನೆಜಿಂಗ್ ಡೈರೆಕ್ಟರ್ ವಿಶ್ವನಾಥ ಪೂಜಾರಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಭಾರತೀಯ ಸೇನೆಯ ಶಿವಾನಂದ ಬಿ. ಪುರುಷರಕಟ್ಟೆ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ರಾಜಾರಾಮ ಕೆ.ಬಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ಬಿ., ವಿಶ್ವನಾಥ ರೈ, ಕೆ.ಪಿ.ಸಿ.ಸಿ ಸಂಯೋಜಕರಾದ ಹೇಮಾನಾಥ ಶೆಟ್ಟಿ ಕಾವು, ಆರಾಧನಾ ಸಂಸ್ಥೆಯ ಸಂಚಾಲಕರಾದ ಪದ್ಮಶ್ರೀ ಭಟ್ ನಿಡ್ಡೋಡಿ ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
