ಪುತ್ತೂರು: ನಮ್ಮ ದೇಶದಲ್ಲಿ ಲವ್ ಜಿಹಾದ್ ನಿಂದಾಗಿ ನಮ್ಮ ಹಿಂದೂ ಸ್ತ್ರೀ ಯರು ಬಲಿಯಾಗುತ್ತಿದ್ದಾರೆ. ಶ್ರದ್ದಾಳನ್ನು ಕೊಲೆ ಮಾಡಿ 35 ತುಂಡುಗಳಾಗಿ ಮಾಡಿದ ಆಫ್ತಾಬ್ ಗೆ ಗಲ್ಲು ಶಿಕ್ಷೆಯಾಗಬೇಕು ಮತ್ತು ಯಾವ ಉದ್ದೇಶಕಾಗಿ ಕೊಲೆ ಮಾಡಿದ್ದಾನೆ ಎಂಬುದರ ತನಿಖೆಯಾಗಬೇಕು ಹಾಗೂ ಇದನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಜಿಲ್ಲಾ ಸಮನ್ವಯಕಿ ಪವಿತ್ರಾ ಕುಡ್ವ ಆಗ್ರಹಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನ.17 ರಂದು ಆಯೋಜಿಸಿದ್ದ ಅಂದೋಲನದಲ್ಲಿ ಮಾತನಾಡಿದರು.

ಆಂದೋಲನವನ್ನುದ್ದೇಶಿಸಿ ಮಾತನಾಡಿದ ಪುತ್ತೂರಿನ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟದ ಬಿಜೆಪಿಯ ಜಿಲ್ಲಾ ಸದಸ್ಯರಾದ ದಿನೇಶ್ ಜೈನ್ ರವರು, ಶಾಂತಿ ಪ್ರಿಯರು ಎಂದೆನಿಸಿಕೊಳ್ಳುವವರು ಇಷ್ಟೊಂದು ಲವ್ ಜಿಹಾದ್, ಗೋ ಹತ್ಯೆ, ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಮಾತನಾಡಲಿಲ್ಲ. ಇಂಥವರನ್ನು ಹೇಗೆ ನಾವು ಶಾಂತಿ ಪ್ರಿಯರು ಎಂದು ಹೇಳಬಹುದು, ಭಾರತ ದೇಶದ ಸಂವಿಧಾನದ ಬಗ್ಗೆ ಕಾನೂನಿನ ಬಗ್ಗೆ ಗೌರವವಿಲ್ಲ ಇಂಥ ಶಾಂತಿ ಪ್ರಿಯರ ಬಗ್ಗೆ ಹಿಂದುಗಳಿಗೆ ಅನುಮಾನ ನಿರ್ಮಾಣ ಆಗಿದೆ ಎಂದರು.

ಪುತ್ತೂರಿನ ನಗರಸಭಾ ಸದಸ್ಯರು, ನ್ಯಾಯವಾದಿಯು ಆಗಿರುವ ವಿದ್ಯಾ ಗೌರಿ ಯವರು ಮಾತನಾಡಿ, ಲವ್ ಜಿಹಾದ್ ನಡೆಸಲು ದೊಡ್ಡ ಷಡ್ಯಂತ್ರವೇ ಇದೆ ಹಿಂದೂ ತರುಣಿಯನ್ನು ಕಪಟ ಪ್ರೇಮದ ಜಾಲದಲ್ಲಿ ಸಿಲುಕಿಸಿ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದರು.
ಆಂದೋಲನದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ, ನಗರಸಭಾ ಸದಸ್ಯರಾದ ಜಗನ್ನ್ನಿವಾಸ ರಾವ್, ನಗರಸಭಾ ಸದಸ್ಯರಾದ ಮೋಹಿನಿ ಬನ್ನೂರು, ಸುಂದರ ಪೂಜಾರಿ ಬಡವ, ದೀಕ್ಷಾ ಪೈ, ಪ್ರೇಮಲತಾ, ಪೂರ್ಣಿಮಾ. ನಗರಸಭಾ ಮಾಜಿ ಅಧ್ಯಕ್ಷರಾದ ರಾಜೇಶ್ ಬನ್ನೂರು, ಸತೀಶ್ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಸತೀಶ್, ಹಾಗೂ ಕೃಷ್ಣ ಪ್ರಸಾದ್ ಲಕ್ಷ್ಮಿ ಬೆಟ್ಟ, ಲಕ್ಷ್ಮಣ ಗೌಡ ಬೆಳ್ಳಿಪಾಡಿ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗೇರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

























