ಪುತ್ತೂರು: ಮಂಗಳೂರು-ಬೆಂಗಳೂರು ಸೇರಿದಂತೆ, ಲೋಕಲ್ ಸಹಿತ ದಿನವಿಡೀ 30ಕ್ಕೂ ಅಧಿಕ ರೈಲು ಸಂಚರಿಸುವ ಕಬಕ ಪುತ್ತೂರು ಹಾದಿಯಲ್ಲಿ ರೈಲು ಅಂಡರ್ ಪಾಸ್ ನಿರ್ಮಾಣದ ಪ್ರಮುಖ ಕಾಮಗಾರಿಯಾಗಿ ರಸ್ತೆ ಸಂಪರ್ಕದ ಕೆಲಸ ನ.19 ರಂದು ಮುಂಜಾನೆ ಪ್ರಾರಂಭಗೊಂಡಿದೆ.

ರೈಲ್ವೆ ಹಳಿಗಳನ್ನು ತೆಗೆದು, ಗುಂಡಿ ತೆಗೆದು ಸಿದ್ದ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ.
ಬಳಿಕ ಮೊದಲಿನಂತೆ ರೈಲು ಮಾರ್ಗ ಹೇಗಿತ್ತೋ ಹಾಗೆಯೇ ಹಾಕಿ ಹಳಿಗಳನ್ನು ಜೋಡಿಸಿ ರೈಲು ಸಂಚರಿಸಲು ಅನುವು ಮಾಡಿಕೊಡಲಾಗುತ್ತದೆ. ಕಾಮಗಾರಿಗಾಗಿ ಒಂದು ಕ್ರೇನ್, ಐದಾರು ಹಿಟಾಚಿ, ಜೆಸಿಬಿಗಳು, ಟಿಪ್ಪರ್ ಗಳನ್ನು ಕಾಮಗಾರಿಗೆ ಬಳಸಲಾಗುತ್ತಿದೆ..


























