ಮಂಗಳೂರು: ಕಾರಿಂಜ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಕಳೆದ ಒಂದು ವರ್ಷದಿಂದ ತೀವ್ರ ಹೋರಾಟ ನಡೆಸಿಕೊಂಡು ಬರುತ್ತಿರುವ ಹಿಂದೂ ಜಾಗರಣ ವೇದಿಕೆ, ಸರಕಾರ ಯಾವುದೇ ಅಧಿಕೃತ ಕಾನೂನು ಜಾರಿ ಮಾಡದ ಹಿನ್ನೆಲೆ, ಕಳೆದ ವರ್ಷ ನಡೆಸಿದ ಸಹಿ ಸಂಗ್ರಹವನ್ನು ನ.19 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ನೀಡಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಹಿಂಜಾವೇ ಪ್ರಾಂತ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ಕಿಶೋರ್ ಕುಮಾರ್, ರತ್ನಾಕರ ಶೆಟ್ಟಿ, ಪ್ರಮುಖರಾದ ಜಗದೀಶ ನೆತ್ತರಕೆರೆ, ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ, ತಿರುಲೇಶ್ ಬೆಳ್ಳೂರು, ರವಿ ಕೆಂಪು ಗುಡ್ಡೆ, ಹರೀಶ್ ಅಮ್ಟಾಡಿ, ತಿಲಕ್ ನಲ್ಕೇಮಾರ್ ಉಪಸ್ಥಿತರಿದ್ದರು.

ಕಾರಿಂಜ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಳದ ಗರ್ಭಗುಡಿಗೆ ಹಾನಿಯಾಗಿದೆ., ಭವಿಷ್ಯದಲ್ಲಿ ದೇವಾಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ನಿಟ್ಟಿನಲ್ಲಿ ಕೋರೆಯನ್ನು ನಿಲ್ಲಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಬೃಹತ್ ಹೋರಾಟ ನಡೆಸಿತ್ತು. ಮೂರು ಹಂತಗಳಲ್ಲಿ ಹಿಂದೂ ಜಾಗರಣ ವೇದಿಕೆ ಬೃಹತ್ ಹೋರಾಟ ನಡೆಸಿತ್ತು..



























