ಉಳ್ಳಾಲ: ಮಂಜೇಶ್ವರ ಮೂಲದ ಯುವಕನೊಬ್ಬ ಕುತ್ತಾರ್‌ನಲ್ಲಿರುವ ಅಜ್ಜಿ ಮನೆಗೆಂದು ಬರುತ್ತಿದ್ದಾಗ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿದ್ದ ಮೂವರು ಅಪರಿಚಿತರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡ್ ಬಳಿ ನಡೆದಿದೆ.
ಮಂಜೇಶ್ವರ ಮೂಲದ ಪ್ರಪುಲ್‍ರಾಜ್ ಹಲ್ಲೆಗೊಳಗಾದ ಯುವಕ.
ಪ್ರಪುಲ್‍ರಾಜ್ ಅವರು ಕುತ್ತಾರ್‌ನಲ್ಲಿರುವ ಅಜ್ಜಿ ಮನೆಗೆಂದು ಮಂಜೇಶ್ವರದಿಂದ ದ್ವಿಚಕ್ರ ವಾಹನದಲ್ಲಿ ಹೊರಟಿದ್ದು, ರಾತ್ರಿ ವೇಳೆ ಅಂಬಿಕಾರೋಡ್ ತಲುಪಿದಾಗ 3 ಜನ ಅಪರಿಚಿತರು ವಾಹನ ನಿಲ್ಲಿಸಿ ಬಳಿಕ ಪ್ರಪುಲ್‍ರಾಜ್‍ಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡ ಪ್ರಫುಲ್ ರಾಜ್ ತೊಕ್ಕೊಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

























