ವಿಟ್ಲ: ಹಿಂದೂ ಯುವತಿಯ ಜೊತೆ ಅನ್ಯಕೋಮಿನ ಯುವಕ ಮತ್ತು ಯುವತಿ ಪತ್ತೆಯಾದ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲ ಅಳಕೆಮಜಲು ನಿನ್ನಿಕಲ್ಲು ಸಮೀಪ ಅನ್ಯಕೋಮಿನ ಇಬ್ಬರು ಯುವಕರು ಮತ್ತು ಓರ್ವ ಯುವತಿ ಹಾಗೂ ಹಿಂದೂ ಯುವತಿಯನ್ನೊಳಗೊಂಡ ಎರಡು ಜೋಡಿಗಳು ಸರಸ-ಸಲ್ಲಾಪ ನಡೆಸುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ವಿಷಯ ತಿಳಿದ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಜೋಡಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಹಿಂದೂ ಹಾಗೂ ಅನ್ಯಕೋಮಿನ ಯುವತಿಯರಿಬ್ಬರು ಕಬಕ ಮೂಲದವರೆನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..
























