ಚಿಕ್ಕಮಗಳೂರು: ‘ಲವ್ ಜಿಹಾದ್’ ರೀತಿಯಲ್ಲೇ ನನ್ನನ್ನ ಬಳಸಿಕೊಂಡು ಅಮಾನುಷವಾಗಿ ನಡೆದುಕೊಂಡಿದ್ದಾರೆ. ಜೀವ ಭಯ ಇರುವ ನನಗೆ ರಕ್ಷಣೆ ನೀಡುವಂತೆ ಕೋರಿ ಹರಿಹರಪುರ ಪೊಲೀಸ್ ಠಾಣೆಗೆ ಯುವತಿಯೋರ್ವಳು ದೂರು ನೀಡಿದ್ದಾಳೆ.

ಕೊಪ್ಪ ಮೂಲದ ಮಹಮ್ಮದ್ ರೌಫ್, ಇರ್ಫಾನ್, ಸೈಫ್
ಸೇರಿದಂತೆ ನಾಲ್ಕು ಜನರ ವಿರುದ್ಧ ನೊಂದ ಯುವತಿ ದೂರು ದಾಖಲಿಸಿದ್ದಾಳೆ. ಮೂರು ವರ್ಷದಿಂದ ದೈಹಿಕ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಬಲವಂತವಾಗಿ ಅಮಲು ಬರುವ ಜ್ಯೂಸ್ ಕುಡಿಸಿ ತಾಳಿ ಕಟ್ಟಿದ ರೀತಿಯಲ್ಲಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಠಾಣೆಯಲ್ಲಿ ದೂರು ನೀಡಿದ್ದಾಳೆ.

ಬಿಕಾಂ ಓದುತ್ತಿರುವ ನನಗೆ ಇನ್ಸ್ಟಾಗ್ರಾಮ್ ಮೂಲಕ ಕೊಪ್ಪದ ಮೊಹಮ್ಮದ್ ರೌಫ್ ಪರಿಚಯ ಆಗಿದ್ದ. ಸ್ನೇಹಿತರಾಗೋಣ ಎಂದು
ಆರಂಭವಾದ ಸ್ನೇಹವು, ನಂತರ ಆತ ನಮ್ಮ ಕಾಲೇಜಿಗೆ ಬಂದು ಆಗಾಗ ಭೇಟಿ ಮಾಡ್ತಿದ್ದ. ಅಲ್ಲದೇ ಒಂದು ಸ್ನೇಹಿತರ ಜೊತೆ ಊಟಕ್ಕೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ಕುಡಿಯಲು ಜ್ಯೂಸ್ ಕೊಟ್ಟಿದ್ದ. ಆ ನಂತರ ನನಗೆ ಏನು ಆಯಿತು ಎಂದು ಗೊತ್ತಿಲ್ಲ. ಸ್ವಲ್ಪ ಸಮಯಗಳ ನಂತರ ಆತ ಹಾಗೂ ಆತನ ಸ್ನೇಹಿತರು ಹಾಸ್ಟೆಲ್ ಬಳಿ ನನ್ನನ್ನ ಬಿಟ್ಟು ಹೋಗಿದ್ದರು. ಈ ಘಟನೆ ನಡೆದು ಎರಡು ದಿನ ಆದ ಮೇಲೆ ಆತ ಮತ್ತೆ ನಮ್ಮ ಹಾಸ್ಟೇಲ್ ಬಳಿ ಬಂದಿದ್ದ.
ಈ ವೇಳೆ ನನಗೆ ಹೊರಗೆ ಬರಲು ವಾರ್ಡನ್ ಬಿಡಲ್ಲ ಎಂದೆ. ಆಗ ಇಲ್ಲ ನಿನ್ನನ್ನ ನಾನು ಭೇಟಿ ಆಗಬೇಕು ಎಂದ. ನಾನು ಇಷ್ಟು ಹೇಳುತ್ತಿದ್ದಂತೆಯೇ ವಾಟ್ಸ್ಆ್ಯಪ್ನಲ್ಲಿ ಎಡಿಟ್ ಮಾಡಿದ ನನ್ನ ಖಾಸಗಿ ಫೋಟೋಗಳನ್ನ ಕಳುಹಿಸಿದ. ನಂತರ ಈ ಎಲ್ಲಾ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಬಿಡ್ತೇನೆ ಎಂದು
ಆವಾಜ್ ಹಾಕಿದ. ಇದರಿಂದ ನಾನು ಆತ ಹೇಳಿದ ಬಳಿ ಹೋಗಬೇಕಾಯಿತು.

ಪ್ರತಿಸಲ ಹೋದಾಗೆಲ್ಲ ಜ್ಯೂಸ್ ಕೊಟ್ಟು ಮತ್ತು ಬರುವಂತೆ ಮಾಡುತ್ತಿದ್ದ. ನಾನು ಪ್ರತಿರೋಧ ಒಡ್ಡಿದಾಗ ಆತನ ಸ್ನೇಹಿತರಾದ ಮೊಹಮ್ಮದ್ ಇರ್ಫಾನ್, ಸೈಫ್ ಇತರರು ಚಾಕು ತೋರಿಸಿ
ಒತ್ತಾಯಪೂರ್ವಕವಾಗಿ ಕುಡಿಸುತ್ತಿದ್ದರು. ನಂತರ ಫೋಟೋ ಹಾಗೂ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಕಳೆದ ಮೂರು ವರ್ಷಗಳಿಂದ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಮಾತ್ರವಲ್ಲ ನನ್ನ ಕೆಲವು ಫೋಟೋಗಳನ್ನ ಸೋಶಿಯಲ್
ಮೀಡಿಯಾದಲ್ಲೂ ಹರಿಬಿಟ್ಟಿದ್ದಾರೆ. ಡಿಲೀಟ್ ಮಾಡುವಂತೆ ಕೇಳಿಕೊಂಡರೂ ಅದನ್ನ ಮಾಡಿಲ್ಲ. ನನ್ನ ಅಣ್ಣನಿಗೂ ಬೆದರಿಕೆ ಹಾಕಿದ್ದಾರೆ. ಲವ್ ಜಿಹಾದ್ ರೀತಿಯಲ್ಲೇ ಮಹಮ್ಮದ್ ರೌಫ್ ಹಾಗೂ ಆತ ಸ್ನೇಹಿತರು ವರ್ತಿಸಿದ್ದು ಇವರುಗಳ
ಮೇಲೆ ಕ್ರಮ ತೆಗೆದುಕೊಂಡು ನನಗೆ ನ್ಯಾಯ ಒದಗಿಸಬೇಕು ಎಂದು ಯುವತಿ ಮನವಿ ಮಾಡಿದ್ದಾಳೆ..


























