ವಿಟ್ಲ: ಬ್ಯಾಂಕ್ ದರೋಡೆ ನಡೆಸಲು ಯತ್ನಿಸಿ, ಖದೀಮರು ವಿಫಲವಾದ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಕೋಡಪದವು ಶಾಖೆಯಲ್ಲಿ ಈ ಘಟನೆ ನಡೆದಿದೆ.
ಬ್ಯಾಂಕ್ ನ ಸಿಸಿ ಕ್ಯಾಮರಾಕ್ಕೆ ಪ್ಲಾಸ್ಟಿಕ್ ಗೋಣಿಚೀಲ ಮುಚ್ಚಿ ಬಳಿಕ ಶಟರನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಿ ಬ್ಯಾಂಕ್ ಒಳಗೆ ನುಗ್ಗಲು ಯತ್ನಿಸಿದ್ದಾರೆ.

ಆದರೇ ಖದೀಮರ ಈ ಪ್ರಯತ್ನ ವಿಫಲಗೊಂಡಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..


























