ಪುತ್ತೂರು: ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ನೇತೃತ್ವದಲ್ಲಿ ಇನ್ನರ್ ವೀಲ್ ಸಹಯೋಗದಲ್ಲಿ ವಿಶ್ವದಾದ್ಯಂತ ಪ್ಲಾಸ್ಟಿಕ್ ನಿಷೇಧಿಸಬೇಕೇ ? ಬೇಡವೇ ? ಪರ ಮತ್ತು ವಿರೋಧ 8 ರಿಂದ 10ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ನ. 19ರಂದು ರೇಡಿಯೋ ಪಾಂಚಜನ್ಯದಲ್ಲಿ ಸ್ಟುಡಿಯೋದಲ್ಲಿ ನಡೆಯಿತು.

ಸ್ಪರ್ಧಾ ಕಾರ್ಯಕ್ರಮವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜು ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಹರೀಶ್ ಶಾಸ್ತ್ರಿ ಅವರು ಉದ್ಘಾಟಿಸಿ, ಚರ್ಚಾ ಸ್ಪರ್ಧಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಭಾವೇದಿಕೆಯಲ್ಲಿ ರೇಡಿಯೋ ಪಾಂಚಜನ್ಯ ಸಮಿತಿ ಅಧ್ಯಕ್ಷರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಇನ್ನರ್‍ವೀಲ್ ಅಧ್ಯಕ್ಷೆ ಟೈನಿ ದೀಪಕ್ ಹಾಗೂ ತೀರ್ಪುಗಾರರಾಗಿ ನಿವೇದಿತಾ ಮತ್ತು ಉಪನ್ಯಾಸಕರಾದ ಮುಕುಂದ ಕೃಷ್ಣ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹರೀಶ್ ಶಾಸ್ತ್ರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಚರ್ಚಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಧಾತ್ರಿ ಆರ್. ರೈ ಮತ್ತು ಕವನಶ್ರೀ (ಪ್ರಥಮ), ಪೆರ್ಲಂಪಾಡಿ ಷಣ್ಮುಖದೇವ ಪ್ರೌಢ ಶಾಲೆಯ ಭವಿತ ಮತ್ತು ಸಹನಾ (ದ್ವಿತೀಯ) ಹಾಗೂ ಧೃತಿ ಮತ್ತು ಶ್ರಾವ್ಯ (ತೃತೀಯ), ಸುದಾನ ವಸತಿಯುತ ಶಾಲಾ ವಿದ್ಯಾರ್ಥಿಗಳಾದ ವಿಘ್ನೇಶ್ ಮತ್ತು ಆಕಾಶ್ ಚತುರ್ಥ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.



























