ಪುತ್ತೂರು: ಭಾರತೀಯ ಜನತಾ ಪಕ್ಷದ ವತಿಯಿಂದ ಪುತ್ತೂರು ನಗರ ಮಂಡಲದ 139 ನೇ ಕೆಮ್ಮಾಯಿ ಕೃಷ್ಣನಗರ ವಾರ್ಡ್ ನಂ7 ರಲ್ಲಿ ಅಂಬೇಡ್ಕರ್ ಜಯಂತಿ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸಲಾಯಿತು ಬಳಿಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಲೀಲಾವತಿ ಕೃಷ್ಣನಗರ, ಬೂತ್ ಅಧ್ಯಕ್ಷ ಅಶೋಕ್ ಕೆಮ್ಮಾಯಿ, ಕಾರ್ಯದರ್ಶಿ ಪ್ರಶಾಂತ್ ಕೃಷ್ಣನಗರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.