ಪುತ್ತೂರು: ಮಹಿಳೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ವೀರಮಂಗಲ ಸಮೀಪ ನಡೆದಿದೆ.

ವೀರಮಂಗಲ ನಿವಾಸಿ ಕೃಷ್ಣಪ್ಪ ಎಂಬವರ ಪತ್ನಿ ಅಕ್ಕಮ್ಮ ಮೃತ ಮಹಿಳೆ.
ಅಕ್ಕಮ್ಮ ಅವರು ಬೆಳಿಗ್ಗೆ ಮನೆಯಿಂದ ನೀರು ತರಲೆಂದು ತೋಟದ ಕೆರೆಯ ಪಕ್ಕಕ್ಕೆ ಹೋದವರು ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ನೀರು ತರಲು ಹೋದ ಅಕ್ಕಮ್ಮ ಇನ್ನೂ ಬಾರದ ಹಿನ್ನೆಲೆಯಲ್ಲಿ ಮನೆ ಮಂದಿ ಹುಡುಕಾಟ ನಡೆಸಿದರು. ಈ ಸಂದರ್ಭ ಅವರ ಮೃತ ದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೆರಳಿ ಕಾರ್ಯಾಚರಣೆ ನಡೆಸುತ್ತಿದ್ದಾರೆ..
ಮೃತರು ಗಂಡ ಕೃಷ್ಣಪ್ಪ, ಪುತ್ರಿಯನ್ನು ಅಗಲಿದ್ದಾರೆ..


























