ವಿಟ್ಲ : ಹಿಂದೂ ಜಾಗರಣ ವೇದಿಕೆಯ ಕೆಲವು ಕಾರ್ಯಕರ್ತರು, ಏ.13 ರಂದು ಅಕ್ರಮ ಗೋವು ಕಳ್ಳಸಾಗಣೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ತಡೆದು ವ್ಯಕ್ತಿಯನ್ನು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಕಾಶಿಮಠದಲ್ಲಿ ನಡೆದಿದೆ.
ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಮಾಣಿ ಮುಲಿಬೈಲಿನ ವ್ಯಕ್ತಿಯೋರ್ವ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಈ ಬಗ್ಗೆ ಮಾಹಿತಿ ತಿಳಿದ ಹಿಂಜಾವೇ ಕಾರ್ಯಕರ್ತರು ವಾಹನವನ್ನು ತಡೆದು ಗೋವುಗಳನ್ನು ರಕ್ಷಿಸಿದ್ದಾರೆ. ಇದು ಅಕ್ರಮ ಸಾಗಾಟವಲ್ಲ ಎಂದು ನೋಡುವವರಿಗೆ ಕಾಣಿಸಬೇಕೆಂಬ ಉದ್ದೇಶದಿಂದ ಆರೋಪಿ ಹಸುವಿನೊಂದಿಗೆ ಕರುವನ್ನು ಕೂಡಾ ಕೊಂಡೊಯ್ಯುತ್ತಿದ್ದ ಎಂದು ಹೇಳಲಾಗಿದೆ.