ಬಂಟ್ವಾಳ : ಏಸುವಿನ ವಿಗ್ರಹ ತೆರವುಗೊಳಿಸುವ ವಿಚಾರವನ್ನು ಒಂದು ಧರ್ಮಕ್ಕೆ ವಿರೋಧವಾಗಿ ಕ್ರಮಕೈಗೊಳ್ಳದೆ, ಎಲ್ಲರಿಗೂ ಸಮಾನ ನ್ಯಾಯ ನೀಡುವಂತೆ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶದ ವತಿಯಿಂದ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.

ಮಣಿಹಳ್ಳ , ಸರಪಾಡಿ, ಅಜಿಲಮೊಗರು, ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಧಾರ್ಮಿ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳಿಗೆ ಸಂಬಂಧಿಸಿದ ಹಲವಾರು ಕಟ್ಟೆಗಳು ಹಾಗೂ ಕಾಣಿಕೆ ಡಬ್ಬಿಗಳು ಇವೆ, ಕಳೆದ ಕೆಲವಾರು ದಿನಗಳಿಂದ ವಿವಿಧ ಸಂಘಟನೆಯವರು ಏಸುವಿನ ವಿಗ್ರಹ ತೆರವುಗೊಳಿಸಲು ಮನವಿ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಪ್ರಮುಖ ವಿವಾದಿತ ಸ್ಥಳದ ಮುಂಭಾಗದಲ್ಲಿರುವ ಸರಕಾರಿ ಸ್ಥಳದಲ್ಲಿ ಸಂಘಟನೆಗೆ ಸೇರಿದ ಕಟ್ಟೆಯಿದೆ., ಆದರೇ ಕೇವಲ ಒಂದು ಧರ್ಮಕ್ಕೆ ವಿರೋಧವಾಗಿ ಕ್ರಮಕೈಗೊಳ್ಳದೆ, ಎಲ್ಲರಿಗೂ ಸಮಾನ ನ್ಯಾಯ ಕೊಟ್ಟು ಶಾಂತಿ ವ್ಯವಸ್ಥೆ ಕಾಪಾಡಬೇಕೆಂದು ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಇದರ ಅಲ್ಲಿಪಾದೆ ಘಟಕದ ಅಧ್ಯಕ್ಷ ಸ್ಟ್ಯಾನಿ ಮಿನೇಜಸ್ ಹಾಗೂ ಸದಸ್ಯರು ಬಂಟ್ವಾಳ ತಹಶೀಲ್ದಾರ್ ಸ್ಮಿತಾರಾಮು ರವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಫಿಲೋಮಿನಾ ಫೆರ್ನಾಂಡಿಸ್, ನವೀನ್ ಮೋರಾಸ್, ಲವೀನಾ ಮೋರಾಸ್, ಪ್ರವೀಣ್ ಪಿಂಟೋ, ನೇವಿಲ್ ಪಿಂಟೋ, ಅವಿನಾಶ್ ಪಿಂಟೋ, ಮೇರಿ ಲಸ್ರೊದೊ ಉಪಸ್ಥಿತರಿದ್ದರು.


























