ವಿಟ್ಲ: ರಸ್ತೆಗೆ ಅಡ್ಡಲಾಗಿದ್ದ ಕೇಬಲ್ ಸಂಚರಿಸುತ್ತಿದ್ದ ಬಸ್ಸಿಗೆ ಸಿಲುಕಿ ಎಳೆದೊಯ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಮುರಿದು ಒಂದು ಟ್ರಾನ್ಸ್ ಫರ್ಮರ್ ನೆಲಕ್ಕುರುಳಿದ್ದರೂ ವಿದ್ಯುತ್ ಕಂಬದಲ್ಲಿದ್ದ ಪವರ್ ಮ್ಯಾನ್ ಪವಾಡ ರೀತಿಯಲ್ಲಿ ಪಾರಾಗಿರುವ ಘಟನೆ ಕೊಳ್ನಾಡು ಗ್ರಾಮದ ಕಾಡುಮಠದಲ್ಲಿ ನಡೆದಿದೆ.
ಸಾಲೆತ್ತೂರು ಮೆಸ್ಕಾಂ ಉಪವಲಯದ ಪವರ್ ಮ್ಯಾನ್ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕು ನಿವಾಸಿ ರಾಜ್ ಅಹಮ್ಮದ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಅದೃಷ್ಟ ವಂತ.