ಮಂಗಳೂರು: ಪಾರ್ಕಿಂಗ್ ಮಾಡಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರು ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದಲ್ಲಿ ನಡೆದಿದೆ.

ಪಾರ್ಕಿಂಗ್ ಮಾಡಿದ್ದ ಫೋರ್ಡ್ ಕಂಪೆನಿಯ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಬಹುತೇಕ ಸುಟ್ಟು ಹೋಗಿದೆ.
ಕಾರಿಗೆ ಬೆಂಕಿ ಹತ್ತಿದ ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ನೀರು ಹಾಕಿ ಪ್ರಯತ್ನಿಸಿದ್ದಾರೆ. ಸ್ಥಳದಲ್ಲಿ ದಟ್ಟವಾದ ಹೊಗೆ ಕೂಡಾ ಆವರಿಸಿದ್ದು, ಆತಂಕದ ವಾತಾವರಣ ಉಂಟಾಗಿದೆ. ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ..

























