ಬಂಟ್ವಾಳ: ತಾಲೂಕಿನ ಸರಪಾಡಿ ಸಮೀಪದ ಅಲ್ಲಿಪಾದೆ ಎಂಬಲ್ಲಿ ಸಂತ ಜೋನ್ ಚರ್ಚ್ ಪಕ್ಕದ ಸರಕಾರಿ ಜಾಗದಲ್ಲಿ ಏಸುವಿನ ಪ್ರತಿಮೆ ನಿರ್ಮಿಸಿ ಅದಕ್ಕೆ ಆವರಣ ಗೋಡೆ ನಿರ್ಮಿಸಿದ್ದನ್ನು ತೆರವುಗೊಳಿಸಲಾಗಿದೆ.


ಇದು ಸರಕಾರಿ ಜಾಗವನ್ನು ಕಬಳಿಸುವ ಹುನ್ನಾರ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದ್ದು, ನಾವೂರ,ಅಲ್ಲಿಪಾದೆ ಎರಡು ಪಂಚಾಯತ್ ಹಾಗೂ ತಾಲೂಕು ದಂಡಧಿಕಾರಿಗಳಿಗೆ ತೆರವುಗೊಳಿಸುವಂತೆ ಆಗ್ರಹಿಸಿ ಮನವಿ ಮಾಡಿತ್ತು. ಶುಕ್ರವಾರ ಬಂಟ್ವಾಳದಲ್ಲಿ ಪತ್ರಿಕಾಗೋಷ್ಠಿ ಕರೆದು ತೆರವುಗೊಳಿಸುವಂತೆ ಒಂದು ವಾರದ ಗಡುವು ನೀಡಿತ್ತು. ಇದರ ಬೆನ್ನಲ್ಲೇ ನಿನ್ನೆ ರಾತ್ರಿ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ.

ಇಂದು ಬೆಳಿಗ್ಗೆ ತಾಲೂಕು ಆಡಳಿತ ಮಂಡಳಿಯವರು ಆವರಣ ಗೋಡೆ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.



























