ಮಂಗಳೂರು: ದನದ ಮಾಂಸದ ಬಿರಿಯಾನಿ ಇದೆ ಎಂದು ವೀಡಿಯೋ ಹರಿ ಬಿಟ್ಟು ವ್ಯಾಪಾರ ಮಾಡುತ್ತಿದ್ದ ಹೋಟೆಲ್ ಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಪೊಲೀಸರೊಂದಿಗೆ ದಾಳಿ ನಡೆಸಿದ ಘಟನೆ ಮುಡಿಪಿನಲ್ಲಿ ನಡೆದಿದೆ.
ಮುಡಿಪು ಸಮೀಪದ ತಾಜ್ ಸೆಂಟರ್ ಎಂಬ ಹೋಟೆಲ್ ನಲ್ಲಿ ದನದ ಮಾಂಸದ ಬಿರಿಯಾನಿ ಇದೆ ಎಂದು ವೀಡಿಯೋ ಮಾಡಿ ಹರಿ ಬಿಟ್ಟಿದ್ದು, ಈ ಬಗ್ಗೆ ಖಚಿತ ಮಾಹಿತಿ ತಿಳಿದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ದಾಳಿ ನಡೆಸಿದ ಪೊಲೀಸರು ದನದ ಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ವಶಕ್ಕೆ ಪಡೆದಿದ್ದು, ಹೋಟೆಲ್ ಮಾಲಕ ಹುಸೇನ್ ಎಂಬವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ..