ಪುತ್ತೂರು: ಸಿಟಿ ಫ್ರೆಂಡ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, 10 ಗೈಯ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಬುದಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸೌದಿ ಅರೇಬಿಯಾ ಸಾದರ ಪಡಿಸುತ್ತಿರುವ 12ನೇ ವರ್ಷದ ಅಂಡರ್ ಆರ್ಮ್ ಕ್ರಿಕೆಟಿಗರ ಹಬ್ಬ ‘ಅಮರ್, ಅಕ್ಬರ್ ಅಂತೋನಿ’ ಸೌಹಾರ್ದ ರೋಲಿಂಗ್ ಟ್ರೋಫಿ, ಹಳ್ಳಿ ಹುಡುಗ್ರು ಪ್ಯಾಟೆಕಪ್, ವಿವಿಧ ಇಲಾಖೆಗಳ ಪಂದ್ಯಾಟ ಡಿ.20 ರಿಂದ 25ರ ವರೆಗೆ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.
ಡಿ.20 ರಂದು ಕಿಲ್ಲೆ ಕಪ್, ಡಿ.21,22 ಹಳ್ಳಿ ಹುಡುಗ್ರು ಪೇಟೆ ಕಪ್, ಡಿ.23,25 ರೋಲಿಂಗ್ ಟ್ರೋಫಿ, ಡಿ. 24 ಡಿಪಾರ್ಟ್ಮೆಂಟ್ ಟೂರ್ನ್ ಮೆಂಟ್ ನಡೆಯಲಿದೆ.
6 ದಿನಗಳ ಕಾಲ ಹಗಲು-ರಾತ್ರಿ ಪಂದ್ಯಾಟ ನಡೆಯಲಿದ್ದು, ಬೆಳಿಗ್ಗೆ 9 ರಿಂದ ರಾತ್ರಿ 10ರ ವರೆಗೆ ಪಂದ್ಯಾಟ ನಡೆಯಲಿದೆ. ಮೆಸ್ಕಾಂ ಸಿಬ್ಬಂದಿ ವರ್ಗಕ್ಕೆ ಸನ್ಮಾನ, ಪುತ್ತೂರ ಮುತ್ತು ಜನಸ್ನೇಹಿ ಸನ್ಮಾನ, ಮೆಸ್ಕಾಂ ಸಿಬ್ಬಂದಿ ವರ್ಗದಿಂದ ಅಣುಕು ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9844677639, 7204972315, 9686671327 ಅನ್ನು ಸಂಪರ್ಕಿಸಬಹುದಾಗಿದೆ..
