‘ಯಾವ ಪಕ್ಷ ಅಂತ ಗೊತ್ತಿಲ್ಲ. ಯಾವ ಪಕ್ಷದಲ್ಲಿ ಸೀಟ್ ಕೊಡ್ತಾರೆ ಆ ಪಕ್ಷದಲ್ಲಿ ಈ ಸಲ ಚುನಾವಣೆಗೆ ನಿಲ್ಲುತ್ತೇನೆ’ ಎಂದು ಚುನಾವಣೆಗೆ ನಿಲ್ಲುವ ಇಂಗಿತವನ್ನು ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ರವರು ವ್ಯಕ್ತಪಡಿಸಿದ್ದಾರೆ.
ಪುತ್ತೂರಿನ ಸಾಲ್ಮರದಲ್ಲಿ ನಡೆದ ಕ್ರಿಕೆಟ್ ಕಾರ್ಯಕ್ರಮವೊಂದಕ್ಕೆ ಅತಿಥಿಗಳಾಗಿ ಆಗಮಿಸಿದ ಅಶೋಕ್ ರೈ ಕೋಡಿಂಬಾಡಿಯವರು ಈ ಬಗ್ಗೆ ಮಾತನಾಡಿದರು.
‘ರಾಜಕೀಯಕ್ಕೆ ಬರಬೇಕಾ..!?? ಎಂಬ ವಿಷಯ ಬಂದಾಗ ಬರಬೇಕು ಅಂತ ಅನಿಸುತ್ತದೆ. ಎಲ್ಲಾ ಕಡೆ ಭ್ರಷ್ಟಾಚಾರ ನಡೆಯುತ್ತಿದೆ. ಬಡವರಿಗೆ ಎಲ್ಲಿ ಹೋದರೂ ಕೆಲಸ ಆಗುವುದಿಲ್ಲ. ಹಾಗಾಗಿ ಬಡವರ ಸೇವೆ ಇನ್ನಷ್ಟು ಮಾಡಲು ರಾಜಕೀಯ ಬಲ ಬೇಕಾಗಿದೆ’.
‘ನೀವೆಲ್ಲಾ ಆಶೀರ್ವಾದ ಮಾಡಿದರೆ ಈ ಬಾರಿ ಚುನಾವಣೆಗೆ ನಿಲ್ಲಬೇಕು ಎಂಬ ಆಶಯ ಇದೆ. ಯಾವ ಪಕ್ಷ ಅಂತ ಗೊತ್ತಿಲ್ಲ. ಯಾವ ಪಕ್ಷದಲ್ಲಿ ಸೀಟ್ ಕೊಡ್ತಾರೆ ಆ ಪಕ್ಷದಲ್ಲಿ ಈ ಬಾರಿ ಚುನಾವಣೆಗೆ ನಿಲ್ಲುತ್ತೇನೆ’., ‘ಸುಮಾರು ಜನ ಕರೆ ಮಾಡಿ ಹೇಳ್ತಾರೆ ಅಣ್ಣ ನೀವು ಯಾವ ಪಕ್ಷದಿಂದ ಬೇಕಾದರೂ ನಿಲ್ಲಿ, ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ’.
‘ಎಲ್ಲಾದರೂ ಅವಕಾಶ ಸಿಕ್ಕಿ ಚುನಾವಣೆಯಲ್ಲಿ ಜಯ ಸಾಧಿಸಿದರೆ. ಖಂಡಿತವಾಗಿಯೂ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಭ್ರಷ್ಟಾಚಾರವನ್ನು ಎಷ್ಟರ ಮಟ್ಟಿಗೆ ತಡೆಗಟ್ಟಲು ಸಾಧ್ಯವೋ ಅಷ್ಟರ ಮಟ್ಟಿಗೆ ನಿಯಂತ್ರಿಸುವ ಪ್ರಯತ್ನವನ್ನು ಮಾಡುತ್ತೇನೆ. ಬಡವರಿಗೆ ಅವರ ಹಕ್ಕು ದೊರೆಯಲು ನಿರಂತರ ಪ್ರಯತ್ನಿಸುತ್ತೇನೆ’ ಎಂದರು.
ಅಶೋಕ್ ಕುಮಾರ್ ರೈ ಕೋಡಿಂಬಾಡಿ ರವರು, ಸದಾ ಒಂದಲ್ಲಾ ಒಂದು ರೀತಿಯಲ್ಲಿ ಜನಪರ ಸೇವೆಯನ್ನು ಮಾಡುತ್ತಾ, ಬಡ ವರ್ಗದವರ ಪಾಲಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ತನ್ನ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ.) ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲದೆ ಬಡವರ್ಗದ ಮನೆಯ ಹೆಣ್ಣು ಮಕ್ಕಳ ಮದುವೆ ಸಹಕಾರ, ಬಡವರ್ಗದ ಕುಟುಂಬದಲ್ಲಿ ಯಾರದರೂ ಅನಾರೋಗ್ಯದಿಂದಿದ್ದರೆ ಅವರ ಚಿಕಿತ್ಸೆ ಸಹಾಯ, ಮಳೆಯಿಂದಾಗಿ ಬಡ ವರ್ಗದವರ ಮನೆ ಕುಸಿದು ಬಿದ್ದರೆ ಹೊಸ ಮನೆ ನಿರ್ಮಾಣ ಅಷ್ಟೇ ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ಬಡವರ ಜೊತೆ ದೀಪಾವಳಿ ಆಚರಿಸುವ ಮುಖಾಂತರ ತಾನು ಉದ್ಯಮದಲ್ಲಿ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ದಾನ ಮಾಡುತ್ತ ಬಂದಿದ್ದಾರೆ.
ಅಶೋಕ್ ರೈ ಯವರ ದರ್ಬೆಯ ಕಚೇರಿಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ತಮ್ಮ ಸಂಕಷ್ಟಕ್ಕೆ ಸಹಾಯವನ್ನು ನೀಡುವಂತೆ ಬರುತ್ತಿದ್ದು, ಅಶೋಕ್ ರೈ ರವರ ಕಚೇರಿಯ ಮುಂಭಾಗ ಜನ ತಮ್ಮ ಸಂಕಷ್ಟದ ಸಹಕಾರಕ್ಕಾಗಿ ಸಾಲು ಗಟ್ಟಿ ನಿಂತಿರುತ್ತಾರೆ. ಚುನಾವಣೆಗಾಗಿ ಅಥವಾ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಡವರಿಗೆ ಸಹಾಯ ಮಾಡದೆ ವರ್ಷಂಪ್ರತಿ ಅಶೋಕ್ ರೈ ರವರು ಸಾವಿರಾರು ಮಂದಿ ಬಡವರ ಕಣ್ಣೊರೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿಯ ಉತ್ತಮ ಕೆಲಸ-ಕಾರ್ಯಗಳನ್ನು ಮಾಡುತ್ತಿರುವ ಅಶೋಕ್ ರೈ ಯವರ ಬಗ್ಗೆ ಸಾರ್ವಜನಿಕ ವಲಯ ಉತ್ತಮ ಅಭಿಪ್ರಾಯವಿದ್ದು, ಇನ್ಮುಂದೆಯು ಬಡವರ್ಗದವರ ಸಹಾಯಕ್ಕಾಗಿ ಅವರು ಸಹಾಯಹಸ್ತ ಚಾಚಲಿದ್ದಾರೆ ಎಂಬ ಆಶಾದಾಯಕ ಮನೋಭಾವ ಸಾರ್ವಜನಿಕ ವಲಯದಲ್ಲಿದೆ..


























