ವಿಟ್ಲ: ‘ನಮ್ಮ ಜವನೆರ್’ ಕುಕ್ಕೆಬೆಟ್ಟು ಇದರ ಆಶ್ರಯದಲ್ಲಿ ಗ್ರಿಪ್ ಮಾದರಿಯ ಮುಕ್ತ ಹಗ್ಗಜಗ್ಗಾಟವು ಕೇಪು ಕುಕ್ಕೆಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.

ಬೆಡೆಮಾರ್ ಜಗಜ್ಜೀವನ್ ರಾಮ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತಾರಾನಾಥ ಆಳ್ವ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಪುರುಷೋತ್ತಮ ಗೌಡ ಕಲ್ಲಂಗಳ, ರಮೇಶ್ ರೈ ಕುಕ್ಕೆಬೆಟ್ಟು, ಕಿರಣ್ ರೈ ಕುಕ್ಕೆಬೆಟ್ಟು, ಮೋಹಿನಿ ಕುಕ್ಕೆಬೆಟ್ಟು ಉಪಸ್ಥಿತರಿದ್ದರು.

ಸ್ಪರ್ಧಾ ವಿಜೇತರಿಗೆ ತಂಡದ ವತಿಯಿಂದ ನಗದು ಬಹುಮಾನ ಹಾಗೂ ಸೌಪರ್ಣಿಕ ಟ್ರೋಫಿಯನ್ನು ಆಯೋಜಿಸಲಾಗಿತ್ತು.
































