ವಿಟ್ಲ: ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಕೈಂತಿಲದಲ್ಲಿ ನಡೆದಿದೆ.

ಮೃತರನ್ನು ವಿಟ್ಲ ಕೈಂತಿಲ ನಿವಾಸಿ ಗಿರಿಯಪ್ಪ ಗೌಡ ಎಂಬವರ ಪತ್ನಿ ಸವಿತಾ (45) ಎಂದು ಗುರುತಿಸಲಾಗಿದೆ.
ಸವಿತಾ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತರು ಪತಿ, ಇಬ್ಬರು ಪುತ್ರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
























