ಮಂಗಳೂರು: ಟಿಪ್ಪರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಚಾಲಕರಿಬ್ಬರು ಮೃತಪಟ್ಟ ಘಟನೆ ರಾ.ಹೆ. 169 ರ ಗುರುಪುರದ ಬೆಳ್ಳಿಬೆಟ್ಟು ಇಳಿಜಾರಿನಲ್ಲಿ ಸೋಮವಾರ ಮುಂಜಾನೆ (ಡಿ.5) ಸಂಭವಿಸಿದೆ.

ಅಪಘಾತದ ಪರಿಣಾಮ ಟಿಪ್ಪರ್ ಮಾಲಕ ಹಾಗೂ ಚಾಲಕ ಕಾವೂರು ಮೂಲದ ಲೋಕನಾಥ್ ಮತ್ತು ಲಾರಿ ಚಾಲಕ ಆಂಧ್ರಪ್ರದೇಶ ಮೂಲದ ವ್ಯಕ್ತಿಯೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ವಾಮಂಜೂರಿನಿಂದ ಗುರುಪುರ ಕಡೆ ತೆರಳುತ್ತಿದ್ದ ಲಾರಿ ಕೈಕಂಬ ಕಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಬ್ರೇಕ್ ಫೈಲ್ ಆಗಿ ಇಳಿಜಾರು ಪ್ರದೇಶವಾದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಬಾರದೆ ಲಾರಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
























