ಪುತ್ತೂರು: ಕೆ.ಎಸ್.ಆರ್.ಟಿ. ಸಿ ಬಸ್‌ನಿಂದ ಪ್ರಯಾಣಿಕರೊಬ್ಬರು ಬಿದ್ದು ಮೃತಪಟ್ಟ ಘಟನೆ ಡಿ.5 ರಂದು ಸಂಜೆ ಕೆಮ್ಮಾಯಿ ಸಮೀಪ ನಡೆದಿದೆ.
ಮೃತರನ್ನು ಕೆದಿಲ ಗ್ರಾಮದ ಮುದ್ರಾಜೆ ನಿವಾಸಿ ಪ್ರಸ್ತುತ ಕೆಮ್ಮಾಯಿಯಲ್ಲಿ ಬಾಡಿಗೆ ಮನೆಯಲ್ಲಿರುವ ಸೋಮಪ್ಪ ನಾಯ್ಕ ಎಂದು ಗುರುತಿಸಲಾಗಿದೆ.

ಸೋಮಪ್ಪ ರವರು ಪುತ್ತೂರಿನಿಂದ ಉಪ್ಪಿನಂಗಡಿ ಹಳೆನೇರಂಕಿ ಕಡೆ ಹೋಗುತ್ತಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು, ಕೆಮ್ಮಾಯಿ
ಬಳಿ ಬಸ್ ನಿಲುಗಡೆ ವೇಳೆ ಬಸ್‌ನಿಂದ ಬಿದ್ದು ತೀವ್ರ
ಗಾಯಗೊಂಡಿದ್ದರು.
ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ..

























