ಪುತ್ತೂರು: ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿರುವ
ಘಟನೆ ಸರ್ವೆ ಗ್ರಾಮದ ಬೊಟ್ಯಾಡಿ ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಸರ್ವೆ ಗ್ರಾಮದ ಕಡ್ಯ ನಿವಾಸಿ ಬಾಬಣ್ಣಗೌಡರ ಪುತ್ರ ಕುಶಾಲಪ್ಪ ಗೌಡ (39) ಎಂದು ಗುರುತಿಸಲಾಗಿದೆ.
ಕುಶಾಲಪ್ಪ ಗೌಡ ರವರು ಬೊಟ್ಯಾಡಿಯ ಮನೆಗಯೊಂದಕ್ಕೆ ತೆಂಗಿನ ಕಾಯಿ ಸುಲಿಯುವ ಕೆಲಸಕ್ಕೆ ತೆರಳಿದ್ದು, ಅಲ್ಲಿ ತೋಟದಲ್ಲಿರುವ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ..


























