ಉಪ್ಪಿನಂಗಡಿ: ಐದನೇ ವರ್ಷಕ್ಕೆ ಹೆಜ್ಜೆಯಿರಿಸುತ್ತಿರುವ ‘ಕೃಷಿ ಏಜೆನ್ಸಿಸ್’ ನವೀಕೃತಗೊಂಡು ಡಿ.8 ರಂದು ಶುಭಾರಂಭಗೊಳ್ಳುತ್ತಿದೆ. ಈ ಹಿನ್ನೆಲೆ ಕೃಷಿ ಉಪಕರಣಗಳ ಮಾರಾಟ ಮತ್ತು ಸೇವೆ ಒಂದು ವಾರಗಳ ಕಾಲ ನಡೆಯಲಿದೆ.
ಡಿ.8 ರಂದು ನವೀಕೃತಗೊಂಡ ನೂತನ ಮಳಿಗೆಯನ್ನು ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಅರಿಕೋಡಿ ರವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳು ಚಲನಚಿತ್ರ ನಟ ರಂಗಭೂಮಿ ಕಲಾವಿದ, ಸುಂದರ ರೈ ಮಂದಾರ, ಶ್ರೀ ಫಾರಂ ಸೊರಕೆ, ಪ್ರಗತಿಪರ ಕೃಷಿಕರಾದ, ಯುವ ಉದ್ಯಮಿ ಭರತ್ ರೈ, ಸಿಝ್ಲರ್ ಅಗ್ರಿಝೋನ್ ನ ಆಡಳಿತ ಪಾಲುದಾರರಾದ ಪ್ರಸನ್ನ ಕುಮಾರ್ ರೈ, ಕೋಡಿಬೈಲ್ ಇಂಪೋರ್ಟ್ & ಎಕ್ಸ್ ಪೋರ್ಟ್ ಪ್ರೈ ಲಿ. ಪುತ್ತೂರು ಆಡಳಿತ ನಿರ್ದೇಶಕರಾದ ಅಜಯ್ ರಾವ್ ರವರು ಆಗಮಿಸಲಿದ್ದಾರೆ.
ಉಪ್ಪಿನಂಗಡಿ ಎಚ್.ಎಮ್. ಆಡಿಟೋರಿಯಂ ಮುಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಲ್ಲಿ ಡಿ.8 ರಿಂದ ಒಂದು ವಾರಗಳ ಕಾಲ ಕೃಷಿ ಯಂತ್ರೋಪಕರಣಗಳ ಮೇಲೆ ವಿಶೇಷ ರಿಯಾಯಿತಿ ದರ, ಮದ್ದು ಬಿಡುವ, ಹುಲ್ಲು ತೆಗೆಯುವ ಯಂತ್ರಗಳ ವಿನಿಮಯ ಮೇಳ ಹಾಗೂ ಉಚಿತ ತಪಾಸಣಾ ಶಿಬಿರ, ಸಿಸಿಟಿವಿ ಅಳವಡಕೆ ಹಾಗೂ ಸಾವಯವ ಗೊಬ್ಬರ ಪ್ರದರ್ಶನ, ಮಾರಾಟ ಮತ್ತು ಸೇವೆ ನಡೆಯಲಿದೆ..



























