ಪುತ್ತೂರು: ಅಣ್ಣನೇ ತಮ್ಮನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಹೊಸೂರಿನ ನಿಂಗಪ್ಪ ಗೌಡ ಬಂಧಿತ ಆರೋಪಿ.

ಡಿ.01 ರಂದು ಸಂಜೆ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಬಳಿಯ ಸೈಟ್ನಲ್ಲಿ ಗಾರೆ ಕೆಲಸ ಮಾಡುವ ನಿಂಗಪ್ಪ ಗೌಡ ಮತ್ತು ಮಹಾದೇವ ಎಂಬ ಸಹೋದರ ನಡುವೆ ಕ್ಷುಲ್ಲಕ್ಕ ಕಾರಣಕ್ಕೆ ಗಲಾಟೆ ಪ್ರಾರಂಭಗೊಂಡು ನಿಂಗಪ್ಪ ಎಂಬವನು ಮಹಾದೇವನಿಗೆ ಕಬ್ಬಿಣದ ರಾಡಿನಿಂದ ತಲೆಗೆ ಮತ್ತು ಮೈಯಿಗೆ ಬಲವಾಗಿ ಹೊಡೆದು ಹಲ್ಲೆಗೊಳಿಸಿ , ಅಲ್ಲಿಂದ ನಿಂಗಪ್ಪ ಗೌಡನು ಓಡಿ ಹೋಗಿರುತ್ತಾನೆ. ಗಾಯಗೊಂಡ ಮಹಾದೇವನನ್ನು ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಪುತ್ತೂರು ನಗರ ಠಾಣಾಯಲ್ಲಿ ಅ.ಕ್ರ 97/ 2022 ಕಲಂ 302 IPC ರಂತೆ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಾಣೆ, ದ.ಕ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ದ.ಕ ಜಿಲ್ಲೆ ರವರ ನಿರ್ದೇಶನದಂತೆ, ಪೊಲೀಸ್ ಉಪಾಧೀಕ್ಷಕರಾದ ಪುತ್ತೂರು ಉಪ ವಿಭಾಗ ವೀರಯ್ಯ ಹಿರೇಮಠ್ ರವರ ಮಾರ್ಗದರ್ಶನದಂತೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಎಂ. ಎನ್ .ರಾವ್ ಪೊಲೀಸ್ ನಿರೀಕ್ಷಕರ ವಿಶೇಷ ತಂಡದ ಸಿಬ್ಬಂದಿಗಳಾದ ಸ್ಕರಿಯಾ,ಜಗದೀಶ್ ,ಕಿರಣ್ ಕುಮಾರ್ ,ವಿರುಪಾಕ್ಷ ರವರ ತಂಡ ಕೇರಳ ರಾಜ್ಯದ ಕಾಸರಗೋಡು, ಚರ್ಕಳ, ಬದಿಯಡ್ಕ, ಪೆರ್ಲ ,ಹಾಗೂ ಕರ್ನಾಟಕ ರಾಜ್ಯದ ಹಾಸನ ,ಚನ್ನರಾಯಪಟ್ಟಣ , ಶ್ರವಣಬೆಳಗೊಳ, ಚಿಕ್ಕಮಂಗಳೂರು ,ಅರಸೀಕೆರೆ ,
ಶಿವಮೊಗ್ಗ, ಹಾವೇರಿ,ಕಡೆಗಳಲ್ಲಿ ಸಂಚರಿಸಿ ಆರೋಪಿ ಇರುವ ಬಗ್ಗೆ ಮಾಹಿತಿ ಖಚಿತಪಡಿಸಿ ಡಿ.6 ರಂದು ಹಾವೇರಿ ಜಿಲ್ಲೆಯ ಕನಕಾಪುರ ಎಂಬಲ್ಲಿಂದ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ದಸ್ತಗಿರಿ ಮಾಡಿದ್ದಾರೆ.
ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
ಪ್ರಕರಣವನ್ನು ಭೇಧಿಸುವಲ್ಲಿ ಶ್ರೀಕಾಂತ್ ರಾಥೋಡ್ ಪೋಲಿಸ್ ಉಪನಿರೀಕ್ಷಕರು ಪುತ್ತೂರು ನಗರ ಠಾಣೆ ಮತ್ತು ಸಹಾಯಕ ಪೊಲೀಸ್ ಉಪನಿರೀಕ್ಷಕರುಗಳಾದ ಕೃಷ್ಣಪ್ಪ,ಲೋಕನಾಥ್, ಹಾಗೂ ಸಿಬ್ಬಂದಿಗಳಾದ ಸ್ಕರಿಯಾ ಜಗದೀಶ್, ಸುಬ್ರಹ್ಮಣ್ಯ, ಉದಯ್ ಕುಮಾರ್ ,ಬಸವರಾಜ್, ಕಿರಣ್ ಕುಮಾರ್ ,ವಿರೂಪಾಕ್ಷ, ರೇವತಿ. ಸಹಕರಿಸಿದ್ದಾರೆ.

























