ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಫೆಸ್ಟ್ ಗ್ರೇಡ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ ‘Best physic body Building’ ಸ್ಪರ್ಧೆಯಲ್ಲಿ ಭಾಗವಹಿಸಿದ ಪುತ್ತೂರಿನ Waves Fitness, ಪಡೀಲ್ ನ ನಿಶಾಂತ್ ಆರ್.ಎಚ್ ರವರು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.

ಇವರು ದಕ್ಷಿಣ ಕನ್ನಡ 2019 ಚಾಂಪಿಯನ್ ಮತ್ತು ಡಬ್ಲ್ಯು ಎಫ್ ಎಫ್ ಏಷ್ಯಾ ಪೆಸಿಫಿಕ್ 2019 ರ ವಿಜೇತ ಸಚಿನ್ ರೈ ಪುತ್ತೂರು ರವರಿಂದ ತರಬೇತಿ ಪಡೆದಿರುತ್ತಾರೆ.
ಇವರು ಸಾಲ್ಮರ ಮಹಾಸತಿನಗರದ ರವೀಂದ್ರ ಸಿ.ಎಚ್ ಮತ್ತು ಮೇನಕಾ ದಂಪತಿಯ ಪುತ್ರ.

ನಿಶಾಂತ್ ರವರು ಬೆಂಗಳೂರಿನಲ್ಲಿ ನಡೆದ ಡಬ್ಲ್ಯು ಎಫ್ ಎಫ್ ಇಂಡಿಯಾ ಚಾಂಪಿಯನ್ ಶಿಫ್ ನಲ್ಲಿ 19 ವರ್ಷದೊಳಗಿನ ದೇಹದಾಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕವನ್ನು ಪಡೆದಿರುತ್ತಾರೆ..


























