ಮಂಗಳೂರು: ಉಳ್ಳಾಲ ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನು ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದುದಲ್ಲದೆ ಮಾಂಸ ದಂಧೆ ನಡೆಸುತ್ತಿದ್ದ ಅಡ್ಡೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ದಂಪತಿ ಸಹಿತ ನಾಲ್ವರನ್ನ ಬಂಧಿಸಿದ್ದಾರೆ.
ಬಂಧಿತರನ್ನು ಬೀರಿ ಬಾಡಿಗೆ ಮನೆ ನಿವಾಸಿ ಮೊಹಮ್ಮದ್ ಇಕ್ಬಾಲ್, ಆತನ ಪತ್ನಿ ಅಲಿಯಮ್ಮ, ಉಳ್ಳಾಲ ನಿವಾಸಿ ಶರ್ಫುದ್ದೀನ್, ವಿಟ್ಲ ಅಡ್ಯನಡ್ಕ ಮೂಲದ ಇರ್ಶಾದ್ ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮೊಹಮ್ಮದ್ ಇಕ್ಬಾಲ್ ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಈತ ಈ ಹಿಂದೆ ಪಿಲಾರು, ಕಾಫಿಕಾಡು ಪ್ರದೇಶಗಳಲ್ಲೂ ಬಾಡಿಗೆ ಮನೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನಲಾಗಿದೆ. ಇವರಿಗೆ ಶರ್ಫುದ್ದೀನ್ ಎಂಬಾತ ಯುವತಿಯರನ್ನು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ನಿನ್ನೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದು, ಯುವತಿಯರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ…

























