ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಡಿ.7 ರಂದು ಶಾಲಾ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು.

ಕೆ.ಜಿ ಯಿಂದ 10ನೇ ತರಗತಿ ವರೆಗೆ ಸುಮಾರು 330 ವಿದ್ಯಾರ್ಥಿಗಳು ಮುತುವರ್ಜಿಯಿಂದ ವಿವಿಧ ವೇಷಧಾರಿಗಳಾಗಿ ಎಲ್ಲರನ್ನೂ ರಂಜಿಸಿದರು.

ಸ್ಪರ್ಧಾಳುಗಳ ಪೋಷಕರು ಕಾರ್ಯಕ್ರಮದಲ್ಲಿ ಬಹಳ ಉತ್ಸುಕತೆಯಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಹಸನ್ ವಿಟ್ಲ, ಆಡಳಿತಾಧಿಕಾರಿ ರಾಧಾಕೃಷ್ಣ ಎ, ಪ್ರಾಂಶುಪಾಲರಾದ ಜಯರಾಮ್ ರೈ, ಉಪ ಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ, ಶಿಕ್ಷಕ – ಶಿಕ್ಷಕೇತರ ವೃಂದದವರು ಸಹಕಾರ ನೀಡಿ ಪಾಲ್ಗೊಂಡರು.

ಸಹ ಶಿಕ್ಷಕಿಯರಾದ ಶೀಲಾ ಮತ್ತು ತುಳಸಿ ಕಾರ್ಯಕ್ರಮ ಸಂಯೋಜಿಸಿದರು..



























