ಬಂಟ್ವಾಳ: ಮೂಲದ ಯುವಕನೋರ್ವ ವಿದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲು ನಿವಾಸಿ ಫಹಾದ್ ಎಂದು ಗುರುತಿಸಲಾಗಿದೆ.

ಫಹಾದ್ ಕಳೆದ ಐದು ತಿಂಗಳ ಹಿಂದೆಯಷ್ಟೇ ಕತಾರ್ ಗೆ ತೆರಳಿದ್ದರು. ಬಂಟ್ವಾಳದಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಫಹಾದ್., ಕತಾರ್ ನಲ್ಲಿ ಕಾರು ಚಾಲಕ ಉದ್ಯೋಗದ ನಿಮಿತ್ತ ತೆರಳಿದ್ದರು. ಸೌದಿ ಅರೇಬಿಯಾದ ಕುಟುಂಬವೊಂದರ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ, ಸಹೋದರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ..


























