ವಿಟ್ಲ: ವ್ಯಕ್ತಿಯೊಬ್ಬರಿಗೆ ಮಾರಕಾಯುಧ ತೋರಿಸಿ ಬೆದರಿಸಿದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಉರಿಮಜಲು ಕಾರ್ಯಾಡಿ ನಿವಾಸಿ ಆಫೀಲ್ ( ಅಪ್ಪಿ) ಬಂಧಿತ ಆರೋಪಿ.
ಉರಿಮಜಲು ಜಂಕ್ಷನ್ ನಲ್ಲಿ ಶರೀಫ್ ಎಂಬವರಿಗೆ ಆಫೀಲ್ ಎಂಬಾತ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಆಫೀಲ್ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತಲವಾರು ಜಳಪಿಸಿದ್ದಾನೆ. ಹಾಡಹಗಲೇ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ..

























